Home ಪ್ರಚಲಿತ ಸುದ್ದಿ ಎ.9 : ಎಂ. ಬಿ. ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ

ಎ.9 : ಎಂ. ಬಿ. ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಉತ್ತಮ ಶಿಕ್ಷಕಿ ಪ್ರಶಸ್ತಿ ಪ್ರದಾನ

0

ಯು.ಟಿ. ಖಾದರ್, ಕಿಶೋರ್ ಬೊಟ್ಯಾಡಿ, ನಳಿನ್ ಕುಮಾರ್ ಕಟೀಲ್, ಭಾಗೀರಥಿ ಮುರುಳ್ಯ ಭಾಗಿ


ಎಂ ಬಿ ಫೌಂಡೇಶನ್ ಸುಳ್ಯ ಇದರ ವತಿಯಿಂದ ಉತ್ತಮ ಶಿಕ್ಷಕರಿಗೆ ಕೊಡಮಾಡುವ ಎಂ ಬಿ ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಅವಾರ್ಡ್ ಪ್ರಧಾನ ಕಾರ್ಯಕ್ರಮ ಹಾಗೂ ವಿಶೇಷ ಚೇತನ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಎ.9 ರಂದು ಸಾಂದೀಪ್ ವಿಶೇಷ ಶಾಲೆ ಸಭಾಂಗಣದಲ್ಲಿ ನಡೆಯಲಿದೆ.


ಪ್ರಶಸ್ತಿ ಪ್ರದಾನ ಸಮಾರಂಭದ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.


ಕೊಲ್ಚಾರು ಸ.ಹಿ.ಪ್ರಾ ಶಾಲೆ ಶಿಕ್ಷಕಿ ಜಲಜಾಕ್ಷಿ ಹಾಗೂ ಸಂತ ಬ್ರಿಜಿಡ್ಸ್ ಸ.ಹಿ.ಪ್ರಾ ಶಾಲೆ ಶಿಕ್ಷಕಿ ವಲ್ಸ ರವರು ಎಂ ಬಿ ದೇವಕಿ ಬಾಲಕೃಷ್ಣ ಎಕ್ಸಲೆನ್ಸ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ,ವಿದ್ಯಾಂಗ ಉಪನಿರ್ದೇಶಕರಾದ ಗೋವಿಂದ ಮಡಿವಾಳ,ನ.ಪಂ ಸದಸ್ಯರಾದ ಕಿಶೋರಿ ಶೇಟ್,ಮೊದಲಾದವರು ಭಾಗವಹಿಸಲಿದ್ದಾರೆ.


ಸಾಮಾಜಿಕ ಮುಖಂಡ ಲತೀಫ್ ಹರ್ಲಡ್ಕ, ನಾಟ್ಯಪ್ರವೀಣೆ ಕುಮಾರಿ ಮಂಜುಶ್ರೀ ರಾಘವ,ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಯಶ್ವಿನಿ ಪಿ ಭಟ್ ರವರನ್ನು ಈ ಸಂದರ್ಭದಲ್ಲಿ ಗೌರವಿಸಲಿದ್ದಾರೆ.


ಕೆಇಎಸ್ ಸಮನ್ವಯ ಅಧಿಕಾರಿ ಶೀತಲ್,ಜಯನಗರ ಸ.ಹಿ.ಪ್ರಾ ಶಾಲೆ ಶಿಕ್ಷಕಿ ಮಮತ ಅಭಿನಂದನಾ ಬಾಷಣ‌ ಮಾಡಲಿದ್ದಾರೆ ಎಂದು ಎಂ ಬಿ ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ತಿಳಿಸಿದ್ದಾರೆ

NO COMMENTS

error: Content is protected !!
Breaking