ಕೆ.ವಿ.ಜಿ. ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ

0

ಸದಸ್ಯರ ಸಹಕಾರದಿಂದ ಸಂಸ್ಥೆ ಬೆಳೆದಿದೆ – ಡಾ. ರೇಣುಕಾಪ್ರಸಾದ್ ಕೆ.ವಿ.

ಕಳೆದ 15 ವರ್ಷಗಳಲ್ಲಿ ಅಭಿವೃದ್ಧಿಯ ಪಥದಲ್ಲಿ ಸಂಘ ಮುನ್ನಡೆಯುತ್ತಿದ್ದು, 2023-24ನೇ ಆರ್ಥಿಕ ವರ್ಷದಲ್ಲಿ ರೂ. 4.53 ಕೋಟಿ ವಿವಿಧ ಠೇವಣಿಗಳನ್ನು ಸಂಗ್ರಹಿಸಿ ರೂ. 3.38 ಕೋಟಿ ಸಾಲ ವಿತರಿಸಿದೆ. ಒಟ್ಟಾರೆಯಾಗಿ 19 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, ರೂ. 15 ಲಕ್ಷ ನಿವ್ವಳ ಲಾಭಗಳಿಸಿದೆ. ಸದಸ್ಯರಿಗೆ 12 ಶೇಕಡಾ ಡಿವಿಡೆಂಟ್ ವಿತರಿಸಲಾಗುವುದು. ಎ.ಒ.ಎಲ್.ಇ. ಬಿ ಕಮಿಟಿಯ ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ನಮ್ಮ ಅನುಪಸ್ಥಿತಿಯಲ್ಲಿ ಎಲ್ಲಾ ವಿದ್ಯಾಸಂಸ್ಥೆಗಳ ಜೊತೆಗೆ ಸಹಕಾರಿ ಸಂಘವನ್ನೂ ಉತ್ತಮವಾಗಿ ಮುನ್ನಡೆಸಿದ್ದಾರೆ. ಅದೇ ರೀತಿ ಸದಸ್ಯರ ಸಹಕಾರದಿಂದ ಸಂಸ್ಥೆ ಬೆಳೆದಿದೆ.


ಎಂದು ಸಂಘದ ಸ್ಥಾಪಕಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ ಹೇಳಿದರು. ಅವರು ಸೆ. 13ರಂದು ಕೆ.ವಿ.ಜಿ. ಐ.ಪಿ.ಎಸ್.ನ ಸಭಾಂಗಣದಲ್ಲಿ ನಡೆದ ಕೆ.ವಿ.ಜಿ. ವಿವಿಧೋದ್ದೇಶದ ಸೌಹಾರ್ದ ಸಹಕಾರಿ ಸಂಘದ ಮಹಾಸಭೆಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ಅಧ್ಯಕ್ಷೆ ಡಾ. ಜ್ಯೋತಿ ಆರ್. ಪ್ರಸಾದ್ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಆರಂಭದಲ್ಲಿ ವರದಿ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಿರ್ದೇಶಕ ದಯಾನಂದ ಎಂ.ಎ. ಮಹಾಸಭೆಯ ವರದಿ ಓದಿ ದಾಖಲಿಸಿದರು. 2023-24ನೇ ಸಾಲಿಗೆ ಮಂಡಿಸಿದ ಮುಂಗಡ ಪತ್ರಕ್ಕಿಂತ ಹೆಚ್ಚುವರಿ ಖರ್ಚನ್ನು ಸಭೆಗೆ ಓದಿದರು. ನಿರ್ದೇಶಕ ನಾಗೇಶ್ ಕೊಚ್ಚಿ 2024-25ನೇ ಸಾಲಿಗೆ ತಯಾರಿಸಿದ ಮುಂಗಡ ಪತ್ರದ ಮಂಡಸಿ ಅನುಮೋದನೆ ಪಡೆದುಕೊಂಡರು. ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ ಕೆ ವರದಿ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿ ಅಂಗೀಕರಿಸಿದರು. ನಿರ್ದೇಶಕ ಭವಾನಿಶಂಕರ ಅಡ್ತಲೆ 2024-25ನೇ ಸಾಲಿನ ಲೆಕ್ಕಪರಿಶೋಧಕರ ನೇಮಕಾತಿ ಬಗ್ಗೆ ಸಭೆಗೆ ಮಂಡಿಸಿದರು. ನಿರ್ದೇಶಕ ಡಾ. ಉಜ್ವಲ್ ಯು.ಜೆ, ವರದಿ ಸಾಲಿನ ನಿವ್ವಳ ಲಾಭದ ಹಂಚಿಕೆಯನ್ನು ಸಭೆಗೆ ಮಂಡಿಸಿದರು. ಸಭೆಗೆ ಆಗಮಿಸಿದ ಸದಸ್ಯರಲ್ಲಿ ಅದೃಷ್ಟವಂತ ಸದಸ್ಯರನ್ನು ಚೀಟಿ ಮೂಲಕ ಆಯ್ಕೆ ಮಾಡಿ ಬಹುಮಾನ ನೀಡಲಾಯಿತು. ಉಪಾಧ್ಯಕ್ಷ ವಸಂತ ಕಿರಿಭಾಗ, ನಿರ್ದೇಶಕರಾದ ಮಾಧವ ಬಿ.ಟಿ, ಪದ್ಮನಾಭ ಕಾನಾವುಜಾಲು, ಪ್ರಸನ್ನ ಕಲ್ಲಾಜೆ, ಡಾ. ಮನೋಜ್ ಅಡ್ಡಂತಡ್ಕ, ಕಮಲಾಕ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕರುಗಳಾದ ಡಾ. ಯಶೋಧ ರಾಮಚಂದ್ರ ಸ್ವಾಗತಿಸಿ, ದಿನೇಶ್ ಮಡ್ತಿಲ ವಂದಿಸಿದರು. ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ್ ಕೇರ್ಪಳ ಪ್ರಾರ್ಥಿಸಿದರು. ಸಂಘದ ಗೌರವ ಸಲಹೆಗಾರರಾದ ಸಂತೋಷ್ ಕೊತ್ತಮಟ್ಟೆ, ದಯಾನಂದ ಕುರುಂಜಿ, ಎಸ್.ಆರ್ ಸೂರಯ್ಯ, ಬಾಲಪ್ರದೀಪ್ ಸೇರ್ಕಜೆ, ದೀಪಕ್ ಕೊತ್ತಮೊಟ್ಟೆ, ಮತ್ತು ಗಣ್ಯರಾದ ಮೌರ್ಯ ಆರ್. ಕುರುಂಜಿ, ಪಿ.ಎಸ್ ಗಂಗಾಧರ್, ಚಂದ್ರ ಕೋಲ್ಚಾರ್, ಕೆ.ಆರ್ ಮನಮೋಹನ್, ಪದ್ಮನಾಭ ಪಾತಿಕಲ್ಲು, ಸದಾನಂದ ಕುರುಂಜಿ, ಎನ್.ಎ. ರಾಮಚಂದ್ರ, ಮತ್ತಿತರು ಉಪಸ್ಥಿತರಿದ್ದರು.