ಸುಬ್ರಹ್ಮಣ್ಯದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ

0

ಕರ್ನಾಟಕ ರಾಜ್ಯ ಸರಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು ಇವರ ಆದೇಶದಂತೆ ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಗೆ ಒಳಪಟ್ಟ ಸುಬ್ರಹ್ಮಣ್ಯ ಪೇಟೆಯ ಪರಿಸರ ,ದೇವಳದ ವಠಾರ, ಮುಖ್ಯರಸ್ತೆ ಬದಿಗಳಲ್ಲಿ, ಕುಮಾರಧಾರ ನದಿ ಸ್ನಾನಘಟ್ಟ ಸುತ್ತಮುತ್ತಲಿನ ವಠಾರದಲ್ಲಿ, ಪರ್ವತಮುಖಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೊರಗಿನ ಮುಖ್ಯರಸ್ತೆ ಇಕ್ಕಡೆಗಳಲ್ಲಿ ,ಹಾಗೂ ಇಂಜಾಡಿ ಮಲಯಾಳದವರೆಗಿನ ಮುಖ್ಯರಸ್ತೆ ಬದಿಗಳಲ್ಲಿ, ಸ್ವಚ್ಛತಾ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಲುವಾಗಿ ಸೆ.20 ರಂದು ಬೃಹತ್ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಎದುರಿನಿಂದ ಆರಂಭವಾದ ಸ್ವಚ್ಛತಾ ಆಂದೋಲನವನ್ನು ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಉದ್ಘಾಟಿಸಿದರು. ರೋಟರಿ ಕ್ಲಬ್ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಸ್ವಾಗತಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚನ್ನಪ್ಪ ಗೌಡ ಕಜೆ ಮೂಲೆ, ಕಡಬ ತಾಲೂಕು ಕಚೇರಿ ವ್ಯವಸ್ಥಾಪಕ ಭುವನೇಂದ್ರ , ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಹಾಗೂ ಸಿಬ್ಬಂದಿ ವರ್ಗದವರು, ಸುಬ್ರಮಣ್ಯ ಗ್ರಾಮ ಪಂಚಾಯತ್ ಪಿ ಡಿ ಒ ಮಹೇಶ್, ಕಾರ್ಯದರ್ಶಿ ಮೋನಪ್ಪ ಸಮಾಜ ಸೇವಕ ಡಾlರವಿಕಕ್ಕೆಪದವ್, ಸುಬ್ರಹ್ಮಣ್ಯೇಶ್ವರ ಪ್ರೌಢಶಾಲಾ ವಿಭಾಗದ ಅಧ್ಯಾಪಕ ಹಾಗೂ ವಿದ್ಯಾರ್ಥಿಗಳು, ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಕುಮಾರಸ್ವಾಮಿ ವಿದ್ಯಾಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು, ಸ್ಕೌಟ್ ಗೈಡ್ಸ್ ರೋವರ್ ರೇಂಜರ್ ವಿದ್ಯಾರ್ಥಿಗಳು, ವಾಣಿ ವನಿತ ಸಮಾಜ, ಸ್ತ್ರೀ ಶಕ್ತಿ ಒಕ್ಕೂಟ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಸುಬ್ರಹ್ಮಣ್ಯ ಲಿಜನ್, ಆಟೋ ಚಾಲಕಮಾಲಕ ಹಾಗೂ ಟ್ಯಾಕ್ಸಿ ಚಾಲಕಮಾಲಕ ಸಂಘದ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಕಸ ವಿಲೇವಾರಿ ಘಟಕದ ಸಿಬ್ಬಂದಿಯವರು ಹಾಗೂ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಈ ಬೃಹತ್ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿ ಸಿದ್ದರು.