ಗಾಂದಿನಗರದಿಂದ ಪ್ರಕಾಶ್ ಥಿಯೇಟರ್‌ನಿಂದ ಸ್ವಲ್ಪ ದೂರದಲ್ಲಿ ರಸ್ತೆ ಬದಿ ನಿಲ್ಲಿಸಿದ ಬೈಕ್ (Ka 21R9164) ಸೆ.೨೨ ರಂದು ಕಳ್ಳತನವಾದ ಘಟನೆ ವರದಿಯಾಗಿದೆ.















ಪ್ರಕಾಶ್ ಜಟ್ಟಿಪಳ್ಳ ಎಂಬವರ ಬೈಕ್ ಇದಾಗಿದ್ದು, ಅವರ ಮಿತ್ರ ಬೈಕ್‌ನ್ನು ಗಂದಿನಗರದ ಬಳಿಯಲ್ಲಿ ತನ್ನ ರೂಮಿನ ಬಳಿ ನಿಲ್ಲಿಸಿ ಸೆ.೨೧ ರ ರಾತ್ರಿ ರೂಂ ಗೆ ತೆರಳಿದ್ದರು. ಸೆ.೨೨ ರ ಬೆಳಗ್ಗೆ ಬೈಕ್ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಕಳ್ಳತನ ಆಗಿರುವುದು ಗೊತ್ತಾಗಿದೆ. ಈ ಬಗ್ಗೆ ಸುಳ್ಯ ಠಾಣೆಗೆ ದೂರು ನೀಡಿರುವುದಾಗಿ ವರದಿಯಾಗಿದೆ. (Ka 21R9164) ನ ಬೈಕ್ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಕೋರಲಾಗಿದೆ.









