ಗಾಂಧಿನಗರ : ರಸ್ತೆ ಬದಿಯಲ್ಲಿ ಕಸ ಎಸೆಯುತ್ತಿರುವ ದೃಶ್ಯ ವೈರಲ್

0

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರ ಅಕ್ರೋಶ

ಗಾಂಧಿನಗರ ಮೇಲಿನ ಪೇಟೆಯಲ್ಲಿ ಪಿಕ್‌ಅಪ್ ವಾಹನ ನಿಲ್ದಾಣದ ಮುಂಭಾಗದ ರಾಜ್ಯ ಹೆದ್ದಾರಿ ರಸ್ತೆಯ ಬದಿಯಲ್ಲಿ ಸ್ಥಳೀಯ ನಿವಾಸಿ ಇಬ್ರಾಹಿಂ ಎಂಬ ವೃದ್ಧರೊಬ್ಬರು ಕಸ ಎಸೆಯುತ್ತಿರುವ ದೃಶ್ಯ ವೈರಲ್ ಆಗಿದೆ.
ದಿನಂಪ್ರತಿ ಬೆಳಗ್ಗೆ ಮನೆಯಿಂದ ಹಸಿ ಕಸ ಮತ್ತು ಒಣ ಕಸವನ್ನು ಚೀಲದಲ್ಲಿ ತಂದು ಸುರಿಯುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ಕಸ ಹಾಕದಂತೆ ಸೂಚಿಸಿದರು ವೃದ್ಧರು ಯಾರು ಮಾತನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂದು ದೂರಿದ್ದು, ಸಂಬಂಧಪಟ್ಟವರು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.