ಪೆರುವಾಜೆ ಸ.ಹಿ.ಪ್ರಾ ಶಾಲೆಯಲ್ಲಿ ಪೋಷಣ್ ಮಾಸಾಚರಣೆ

0

ಸ.ಹಿ.ಪ್ರಾ. ಶಾಲೆ ಪೆರುವಾಜೆಯಲ್ಲಿ ಸೆ.23ರಂದು ಪೋಷಣ್ ಮಾಸಾಚರಣೆ ನಡೆಯಿತು. ಸಮುದಾಯ ಪ್ರಾಥಮಿಕ ಆರೋಗ್ಯ ಅಧಿಕಾರಿಗಳಾದ ಕು. ರಚನಾ ರವರು ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರಗಳ ಪರಿಚಯ ಮಾಡಿಸುವುದರೊಂದಿಗೆ, ಪೌಷ್ಟಿಕ ಆಹಾರ ಸೇವನೆಯ ಮಹತ್ವ ವಿವರಿಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ತೇಜಪ್ಪ ಎಸ್, ಸಹಶಿಕ್ಷಕರಾರ ಶ್ರೀಮತಿ ಲಲಿತಕುಮಾರಿ, ಶ್ರೀಮತಿ ರತ್ನಾವತಿ ಬಿ, ಶ್ರೀಮತಿ ಶ್ರುತಿ , ಶ್ರೀಮತಿ ಭವ್ಯ, ಶ್ರೀಮತಿ ಲೀನಾ, ಆಶಾ ಕಾರ್ಯಕರ್ತೆಯಾದ ಶ್ರೀಮತಿ ರಾಗಿಣಿ , ಅಡುಗೆ ಸಿಬ್ಬಂದಿ ಶ್ರೀಮತಿ ಪ್ರೇಮಾ, ಪೋಷಕರಾದ ಶ್ರೀಮತಿ ಸವಿತಾ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.