ಸುಳ್ಯ: ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

0

ಸುಳ್ಯದ ಪರಿವಾರಕಾನ ಬಳಿ ಸ್ನೇಹ ಶಾಲೆ ಕಡೆ ಹೋಗುವ ರಸ್ತೆ ಬದಿ ಕಳೆದ ಕೆಲವು ದಿನಗಳಿಂದ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸ್ವಲ್ಪ ಸಮಯದಿಂದ ಈ ಓಮ್ನಿ ಕಾರು ಇಲ್ಲಿ ನಿಲ್ಲಿಸಿಕೊಂಡಿತ್ತು. ಓಮ್ನಿ ಯಲ್ಲಿ ಶವ ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಶವ ಇದೆ. ಪೊಲೀಸರು ಇನ್ನಷ್ಟೆ ಸ್ಥಳಕ್ಕೆ ಬರಬೇಕಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.