ಗುತ್ತಿಗಾರು ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು, ಕಾರ್ಯದರ್ಶಿ ಅಜಿತ್ ಬಾಕಿಲ

0

ವೀರಮಾರುತಿ ಸ್ಪೋರ್ಟ್ಸ್ ಕ್ಲಬ್ ಗುತ್ತಿಗಾರು ಇದರ ಮಹಾಸಭೆ ಸೆ. 20 ರಂದು ನಡೆಯಿತು. ಈ ಸಭೆಯಲ್ಲಿ 2024 – 25 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಮಾಧವ ಎರ್ದಡ್ಕ, ನೂತನ ಅಧ್ಯಕ್ಷರಾಗಿ ಅಚ್ಚುತ ಗುತ್ತಿಗಾರು, ಪ್ರಧಾನ ಕಾರ್ಯದರ್ಶಿಯಾಗಿ ಅಜಿತ್ ಬಾಕಿಲ ಹಾಗೂ ಕೋಶಾಧಿಕಾರಿಯಾಗಿ ಕಾರ್ತಿಕ್ ಪೈಕ ಇವರನ್ನು ಆಯ್ಕೆ ಮಾಡಲಾಯಿತು. ವಿವಿಧ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಜಯಪ್ರಕಾಶ್ ಬಾಕಿಲ ವಹಿಸಿದ್ದರು, ಕಾರ್ಯದರ್ಶಿ ದಿಗಂತ್ ಕಡ್ತಲ್ಕಜೆ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕಾದ ಸತೀಶ್ ಮೂಕಮಲೆ ಹಾಗೂ ವಿಜೇಶ್ ಹಿರಿಯಡ್ಕ ಉಪಸ್ಥಿತರಿದ್ದರು. ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು ನಿರ್ದೇಶಕರು ಸದಸ್ಯರು ಹಾಜರಿದ್ದರು.