ಸುಳ್ಯ ದಸರಾ ಉತ್ಸವದ ಶೋಭಾಯಾತ್ರೆಗೆ ಮಂಜು ಬ್ರದರ್ಸ್ ರವರ 4 ನೇ ವರ್ಷದ ಸ್ಥಬ್ಧ ಚಿತ್ರವನ್ನು ಹಮ್ಮಿಕೊಳ್ಳುವ ಪೂರ್ವಭಾವಿಯಾಗಿ ಸುಳ್ಯದ ಕಲ್ಕುಡ ದೇವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ ಪೋಸ್ಟರ್ ನ್ನು ಸೆ.25 ರಂದು ಬಿಡುಗಡೆ ಮಾಡಲಾಯಿತು.









ದೈವಸ್ಥಾನದ ಆಡಳಿತ ಧರ್ಮದರ್ಶಿ ಮಂಡಳಿಯ ಸದಸ್ಯ ಸೋಮನಾಥ ಪೂಜಾರಿ ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಂಜು ಬ್ರದರ್ಸ್ ಕಲಾ ತಂಡದ ಮುಖ್ಯಸ್ಥ ಮಂಜು ಬೀರಮಂಗಲ, ಡಿ.ಜೆ.ಫ್ರೆಂಡ್ಸ್ ದೀಪಕ್ ಸುಳ್ಯ, ಸಾಗರ್ ರೈ ಕಾಯರ್ತೋಡಿ, ಶಿವಪ್ರಸಾದ್ ಕೊಡಿಯಾಲಬೈಲು ಹಾಗೂ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು. ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು ಸಹಕರಿಸಿದರು.
ಸ್ಥಬ್ಧ ಚಿತ್ರದ ಆಯೋಜನೆಗೆ ಗಜಕೇಸರಿ ನಡುಬೈಲು, ಡಿ.ಜೆ.ಫ್ರೆಂಡ್ಸ್, ಶಿವ ಟ್ರಾವೆಲ್ಸ್ ಮತ್ತು ಅಂಬ್ಯುಲೆನ್ಸ್,ಸಂಸ್ಕೃತಿ ಚಾರಿಟೇಬಲ್ ಟ್ರಸ್ಟ್ ಬೊಳಿಯಮಜಲು,ವಿಶ್ವ ಕಾಂಪ್ಲೆಕ್ಸ್ ಜಟ್ಟಿಪಳ್ಳ ಸುಳ್ಯ ಸಹಕಾರ ನೀಡಲಿದ್ದಾರೆ.









