ಕಳಂಜ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ಮೋನಪ್ಪ ಮಣಿಮಜಲು ರಾಜಿನಾಮೆ

0

ಕಳಂಜ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಮೋನಪ್ಪ ಮಣಿಮಜಲು ಸೆ. 9ರಂದು ರಾಜೀನಾಮೆ ಸಲ್ಲಿಸಿರುವುದಾಗಿ ವರದಿಯಾಗಿದೆ.

ಕಳಂಜ ಗ್ರಾಮದ ಮಣಿಮಜಲು ದಿlಸುಬ್ಬ ಮೂಲ್ಯ ಮತ್ತು ದಿlಅಕ್ಕು ಹೆಂಗ್ಸು ದಂಪತಿಗಳ ಪುತ್ರ ಮೋನಪ್ಪ ಮಣಿಮಜಲು ಅಯ್ಯನಕಟ್ಟೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಳ್ಳಾರೆಯಲ್ಲಿ ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಪೂರೈಸಿರುತ್ತಾರೆ.

1987ರಲ್ಲಿ ಹಾಲು ಸೊಸೈಟಿ ಕಾರ್ಯದರ್ಶಿಯಾಗಿ ನೇಮಕವಾಗಿದ್ದ ಇವರು ಹಲವು ಬಾರಿ ಕೆ.ಎಂ.ಎಫ್ ಸಂಸ್ಥೆ ನೀಡುವ ಉತ್ತಮ ಗುಣಮಟ್ಟದ ಹಾಲು ಪೂರೈಕೆ ಸಂಸ್ಥೆ, ಉತ್ತಮ ಕಾರ್ಯದರ್ಶಿ, ಉತ್ತಮ ಹಾಲ ಉತ್ಪಾದಕರ ಸಂಸ್ಥೆ ಪ್ರಶಸ್ತಿ ಪಡೆಯುವಂತೆ ಕೆಲಸ ನಿರ್ವಹಿಸಿದ್ದರು. ಮೋನಪ್ಪ ಅವರ ಪತ್ನಿ ರೇಖಾ ಬಿ. ಎಂ, ಮಗ ಖಾಸಗಿ ಉದ್ಯೋಗಿ ವರ್ಣಿತ ಕುಮಾರ್, ಪುತ್ರಿ ಶ್ರೀಮತಿ ಗೀತಾ ನಾಗರಾಜ್ ಕುಲಾಲ್ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಿಬ್ಬಂದಿ.