ಫೆ. 8ರಂದು ಗುತ್ತಿಗಾರಿನಲ್ಲಿ ರಕ್ತದಾನ ಶಿಬಿರ ಮತ್ತು ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಮತ್ತು ಗೌರವ ಸಮರ್ಪಣಾ ಕಾರ್ಯಕ್ರಮ

0

ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು 5ನೇ ವರ್ಷದ ಪ್ರಯುಕ್ತ ಫೆ. 8ರಂದು ರಕ್ತದಾನ ಶಿಬಿರ ಮತ್ತು ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.

ಗ್ರಾಮೀಣ ಪ್ರದೇಶದಲ್ಲಿ ಆಂಬುಲೆನ್ಸ್ ಸೇವೆ, ರಕ್ತದಾನ, ತುರ್ತು ಸಂದರ್ಭದಲ್ಲಿ ರಕ್ತದ ಪೂರೈಕೆ, ಯೋಗ ತರಬೇತಿ ಕೇಂದ್ರ, ಡ್ಯಾನ್ಸ್ ತರಬೇತಿ ಕೇಂದ್ರ, ಚೆಸ್ ತರಬೇತಿ ಕೇಂದ್ರ, ಕರಾಟೆ ತರಬೇತಿ ಕೇಂದ್ರ, ಸೇರಿದಂತೆ ವಿವಿಧ ಸೇವಾ ಕಾರ್ಯ ಗಳನ್ನು ದಾನಿಗಳ ಸಹಕಾರ ದಿಂದ ನಡೆಸುತ್ತಾ ಬಂದಿರುವ ಟ್ರಸ್ಟ್
ಡಿ.,14 ರಂದು ಪೂರ್ವಭಾವಿ ಸಭೆ ನಡೆಸಲಾಯಿತು.
ಯೋಗಾಸನ ಸ್ಪರ್ಧೆ ಯನ್ನು 1ನೇ ತರಗತಿಯಿಂದ 12ನೇ ತರಗತಿವರೆಗಿನ ಹುಡುಗ ಹಾಗೂ ಹುಡುಗಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ನಡೆಸಲಿದ್ದು ಈ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯರಾದ ಬೆಳ್ಯಪ್ಪಗೌಡ ಕಡ್ತಲಕಜೆ, ಸನತ್ ಮುಳುಗಾಡು, ಗ್ರಾ. ಪಂಚಾಯತ್ ಸದಸ್ಯರಾದ, ವಿನಯ್ ಸಾಲ್ತಾಡಿ, ವೆಂಕಟ್ ವಳಲಂಬೆ, ಪಿ. ಎಂ. ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುತ್ತಿಗಾರಿನ ಯಸ್ ಡಿ. ಯಂ. ಸಿ. ಅಧ್ಯಕ್ಷ ವೆಂಕಟ್ ದಂಬೆಕೋಡಿ,ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ,ಜೀವನ್ ಚಿಕ್ಮುಳಿ, ರೋಹಿತ್ ಹರಿಹರ, ನಿರಂತ್ ದೇವಸ್ಯ, ಯೋಗ ಗುರು ಶರತ್ ಮರ್ಗಿಲಡ್ಕ,ಮೋಹನ್ ದಾಸ್ ಶಿರಾಜೆ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.