
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2026ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಡಿ.17ರಂದು ಸಂಘದ ಕಛೇರಿಯಲ್ಲಿ ನಡೆಯಿತು.





ಸಂಘದ ಅಧ್ಯಕ್ಷರಾದ ಡಾ. ಸೋಮಶೇಖರ್ ಕಟ್ಟೆಮನೆ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಉಪಾಧ್ಯಕ್ಷರಾದ ಗಣೇಶ್ ಭಟ್ ಇಡ್ಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಬೆಳ್ಯಪ್ಪ ಗೌಡ ಮಣಿಯಾನಮನೆ, ನಿರ್ದೇಶಕರಾದ ಶೇಷಪ್ಪ ಗೌಡ ಕಿರಿಭಾಗ, ಕಮಲಾಕ್ಷ ಮುಳ್ಳುಬಾಗಿಲು,
ರೇಗನ್ ಶೆಟ್ಟಿಯಡ್ಕ, ವೇದಾವತಿ ಮುಳ್ಳುಬಾಗಿಲು, ಮೇನಕಾ ಕೊಪ್ಪಡ್ಕ, ಗೋಪಾಲಕೃಷ್ಣ ಚಾಂತಾಳ, ಮಹಾಲಿಂಗ ನಾಯ್ಕ ಶಿರೂರು ಹಾಗೂ ನವೋದಯ ಸ್ವಸಹಾಯ ಸಂಘದ ಸೇವಾಪ್ರತಿನಿಧಿ ಚಂದ್ರಕಲಾ ಉಪಸ್ಥಿತರಿದ್ದರು. ಇದೇ ವೇಳೆ ವಿಶ್ವನಾಥ ಕಿರಿಭಾಗ, ಪುರುಷೋತ್ತಮ ಬಟ್ಟೋಡಿ, ಶಿಕ್ಷಕಿ ದೇವಕಿ, ದೀಕ್ಷಿತ್ ದೊಡ್ಡಕಜೆ ಮತ್ತಿತರರಿಗೆ ಕ್ಯಾಲೆಂಡರ್ ವಿತರಿಸಲಾಯಿತು.

















