ದೇವಚಳ್ಳ : ಶತಮಾನೋತ್ಸವ ಸಮಿತಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಭೆ

0

ದ. ಕ. ಜಿ. ಪ. ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇದರ ಹಿರಿಯ ವಿದ್ಯಾರ್ಥಿ ಸಂಘ ಹಾಗು ಶತಮಾನೋತ್ಸವ ಸಮಿತಿಯ ಸಭೆಯು ಸೆ.28 ರಂದು ನಡೆಯಿತು.

ಶತಮಾನೋತ್ಸವ ಪ್ರಯುಕ್ತ ಕಾರ್ಯಾರಂಭಗೊಂಡ ಯೂ ಟ್ಯೂಬ್ ಚಾನೆಲ್ ನ್ನು ಸೇರಿದ ಎಲ್ಲಾ ಹಳೆ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಮುಖ್ಯೋಪಾದ್ಯರಾದ ಶ್ರೀಧರ ಕೆರೆಮೂಲೆ ಹಿರಿಯ ನಿವೃತ ಅಧ್ಯಾಪಕರಾದ ಪುರುಷೋತ್ತಮ ಕೇಪಳಕಜೆ, ಶತಮಾನೋತ್ಸವ ಸಮಿತಿಯ ಅದ್ಯಕ್ಷರಾದ ಎ.ವಿ. ತೀರ್ಥರಾಮ, ಕಾರ್ಯದರ್ಶಿಗಳಾದ ಗೋಪಿನಾಥ ಮೆತ್ತಡ್ಕ, ಎಸ್ ಡಿ ಎಂಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ, ಹಳೆ ವಿದ್ಯಾರ್ಥಿ ಸಮಿತಿಯ ಅಧ್ಯಕ್ಷರಾದ ಹರಿಪ್ರಸಾದ್ ಬಿ ವಿ, ಪ್ರಧಾನ ಕಾರ್ಯದರ್ಶಿ ರಾಜಗೋಪಾಲ ಅಂಬೆಕಲ್ಲು, ಪೂರ್ವ ಪ್ರಾಥಮಿಕ ಶಾಲಾ ಪೋಷಕ ಸಮಿತಿ ಅಧ್ಯಕ್ಷರಾದ ರಾಜೇಶ್ ಗುಡ್ಡೆ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘವನ್ನು ಇನ್ನಷ್ಟು ಬಲಗೊಳಿಸಲು ಕಾರ್ಯಕಾರಿಣಿ ಸಮಿತಿಗೆ ನೂತನ ಸದಸ್ಯರನ್ನು ನೇಮಿಸಲಾಯಿತು. ಇದರ ಜೊತೆಗೆ ಶತಮಾನೋತ್ಸವ ಕಾರ್ಯಕ್ರಮ ದ ಅಂಗವಾಗಿ ವಿವಿದ ಸಮಿತಿಗಳನ್ನು ರಚಿಸಲಾಯಿತು.