ಅ. 6: ಕಲ್ಮಡ್ಕದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ

0

ವೈದೇಹಿ ಯುವತಿ ಮಂಡಲ ಕಲ್ಮಡ್ಕ ಮತ್ತು ಶ್ರೀ ಶಾರದೋತ್ಸವ ಸಮಿತಿ ಕಲ್ಮಡ್ಕ ಇದರ ಆಶ್ರಯದಲ್ಲಿ 9ನೇ ವರ್ಷದ ಶ್ರೀ ಶಾರದೋತ್ಸವ ಅ. 6ರಂದು ಕಲ್ಮಡ್ಕದ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ.
ಬೆಳಿಗ್ಗೆ 8.00 ಗಂಟೆಗೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ಗಣಪತಿ ಹೋಮ, ಭಜನೆ ನಡೆಯಲಿದೆ. ಮಧ್ಯಾಹ್ನ 11.00 ಗಂಟೆಯಿಂದ ಶ್ರೀರಾಮ ಸೇವಾ ಟ್ರಸ್ಟ್ ಕಲ್ಮಡ್ಕ ಇದರ ಅಧ್ಯಕ್ಷ ಶ್ರೀನಿವಾಸ ಜೆ ಯವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಲ್ಮಡ್ಕ ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ಲತೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಚೊಕ್ಕಾಡಿ ಇದರ ಆಧ್ಯಾತ್ಮಿಕ ಸಂಯೋಜಕಿ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ್ ಧಾರ್ಮಿಕ ಉಪನ್ಯಾಸ ನೀಡಿದ್ದಾರೆ. ಆಶಾ ಕಾರ್ಯಕರ್ತೆ ಶ್ರೀಮತಿ ಯಮುನಾ ಓಟೆಕಜೆ ಎಂ.ಎಡ್ ರ್ಯಾಂಕ್ ವಿಜೇತೆ ಶ್ರೀಮತಿ ಜಯಲಕ್ಷ್ಮಿ ಯವರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಪದವಿ ರ್ಯಾಂಕ್ ವಿಜೇತೆ ಕು. ಪ್ರಿಯಾರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಮಧ್ಯಾಹ್ನ ಮಂಗಳಾರತಿ ಬಳಿಕ ಪ್ರಸಾದ ಭೋಜನ ನಡೆಯಲಿದೆ. ಅಪರಾಹ್ನ 2.00 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಸಂಜೆ 4.00 ಗಂಟೆಯಿಂದ ನಾಸಿಕ್ ಬ್ಯಾಂಡ್ ಮತ್ತು ಶ್ರೀರಾಮ ಮಕ್ಕಳ ಕುಣಿತ ಭಜನಾ ತಂಡದ ಕುಣಿತ ಭಜನೆಯೊಂದಿಗೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ನಡೆಯಲಿದೆ.