ಸುಳ್ಯ ಶ್ರೀರಾಮಪೇಟೆಯಲ್ಲಿ ತಡೆಬೇಲಿಗೆ ಗುದ್ದಿದ ಕಾರು – ಅಪಾಯದಿಂದ ಪಾರು

0

ಸುಳ್ಯದ ಶ್ರೀರಾಮಪೇಟೆಯಲ್ಲಿ ಕಾರೊಂದು ರಸ್ತೆ ಬದಿಯ ತಡೆಬೇಲಿಗೆ ಗುದ್ದಿದ್ದು ಕಾರಿನ ಎದುರು ಭಾಗ ಸಂಪೂರ್ಣ ಹಾನಿಗೊಂಡಿದೆ.


ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ.
ಇಂದು ಮುಂಜಾನೆ ಬೆಂಗಳೂರಿನಿಂದ ಬಿಸಿ ರೋಡಿಗೆ ಹೋಗುವ ಸ್ಕೊಡ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆಬೇಲಿಗೆ ಗುದ್ದಿ ತಡೆಬೇಲಿ ಮುರಿದು ಕಾರು ಸೂಪರ್ ಮಾರ್ಕೆಟ್ ಎದುರು ಬಂದು ನಿಂತಿದೆ.ಅಂಗಡಿಯ ಬೋರ್ಡಿಗೂ ಹಾನಿಯಾಗಿದೆ.