ಪಂಜ : ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ

0

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ3 ರಂದು ಆರಂಭ ಗೊಂಡಿದ್ದು ಅ.12 ನಡೆಯಲಿದೆ.

ಅ.11 ಆಯುಧ ಪೂಜೆ ದಿವಸ ವಾಹನ ಪೂಜೆ ಪೂರ್ವಾಹ್ನ ಗಂಟೆ 8 ರಿಂದ 2.30 ರ ತನಕ. ಸಂಜೆ ಗಂಟೆ 5 ರಿಂದ ರಾತ್ರಿ 9.30 ತನಕ ನಿರಂತರ ನಡೆಯಲಿದೆ.

ಸಂಜೆ ಗಂಟೆ 6 ರಿಂದ ವನಿತ ಸಮಾಜ (ರಿ) ಪಂಜ ವತಿಯಿಂದ ಭಜನಾ ಸಂಕೀರ್ತನೆ, ಕುಮಾರಿ ಹೇಮಾಸ್ವಾತಿ ಕುರಿಯಾಜೆ ಮತ್ತು ತಂಡ ಇವರಿಂದ ಭರತನಾಟ್ಯ ಮತ್ತು ಯಕ್ಷಗಾನ ಭಾಗವತಿಕೆ ಜರುಗಲಿದೆ.

ಅ.10 ರಂದು ಕೇನ್ಯ ಶ್ರೀ ದುರ್ಗಾ ಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಭಜನಾ ಸಂಕೀರ್ತನೆ . ಪವನ್ ನರಿಯಂಗ ಕೇನ್ಯ ಇವರಿಂದ ತಬಲ ವಾದನ ಜರುಗಿತು.ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ , ವ್ಯವಸ್ಥಾಪನಾ ಸಮಿತಿ ಸದಸ್ಯರು, ಗೌರವ ಸಲಹೆಗಾರರು,ಸೀಮೆಯ ಭಕ್ತಾದಿಗಳು ಉಪಸ್ಥಿತರಿದ್ದರು.


ಅ. 12 ರಂದು ಯುವ ಸ್ಫೂರ್ತಿ ಕಲ್ಮಡ್ಕ ಇವರಿಂದ ಭಜನಾ ಸಂಕೀರ್ತನೆ.ಶ್ರೀಮತಿ ಚೈತ್ರಿಕ ಕೋಡಿಬೈಲು ರವರಿಂದ ಸಂಗೀತ ಸೇವೆ ಜರುಗಲಿದೆ.


ಪ್ರತಿ ದಿನ ಶ್ರೀ ದೇವರಿಗೆ ಮಹಾ ಪೂಜೆ, ಪ್ರಸಾದ ವಿತರಣೆ , ಅನ್ನ ಸಂತರ್ಪಣೆ. ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಮತ್ತು ಅಷ್ಟಾವಾದನ ಕಾರ್ಯಕ್ರಮ ಸಂಜೆ ಗಂಟೆ 6ರಿಂದ ರಾತ್ರಿ 8.30 ರ ತನಕ ನಡೆಯಲಿದೆ.

ಪ್ರತಿ ದಿನ ಭಜನಾ ಸಂಕೀರ್ತನ ಸಂಜೆ ಗಂಟೆ 6 ರಿಂದ 7: 45 ರ ತನಕ ಮತ್ತು ಅಷ್ಟಾವಾದನ ಕಾರ್ಯಕ್ರಮ ರಾತ್ರಿ ಗಂಟೆ 8 ರಿಂದ 8:30 ತನಕ ನಡೆಯಲಿದೆ.