ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ನವರಾತ್ರಿ ಪೂಜೆ

0

ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ನವರಾತ್ರಿ ಪೂಜೆ ಅ.9ರಿಂದ 11ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ನವರಾತ್ರಿಯ ಪ್ರಯುಕ್ತ ಅ.9ರಿಂದ 11ರ ತನಕ ಪ್ರತಿ ದಿನವೂ ವಿವಿಧ ಸೇವೆಗಳು ನಡೆಯಿತು.ಹೂವಿನ ಪೂಜೆ, ಪಣಪಾಯಸ, ಕುಂಕುಮಾರ್ಚನೆ ಮತ್ತು ದುರ್ಗಾನಾಮಾರ್ಚನೆ ಸೇವೆಗಳು ನೆರವೇರಿದವು.


ವಾಹನಪೂಜೆ: ಅ. 9ರಿಂದ 11ರ ವರೆಗೆ ಬೆಳಿಗ್ಗೆ 8ರಿಂದ 12ರ ತನಕ ಮತ್ತು ಸಂಜೆ ಗಂಟೆ 4ರಿಂದ 7ರ ತನಕ ವಾಹನ ಪೂಜೆ ನಡೆಯಿತು.
ಅ.11 ಶುಕ್ರವಾರ ಬೆಳಿಗ್ಗೆ ಗಂಟೆ 10.30ಕ್ಕೆ ಆಯುಧಪೂಜೆ ನಢಯಿತು. ಅ.11 ಶುಕ್ರವಾರ ರಾತ್ರಿ ಗಂಟೆ 7 ರಿಂದ ದುರ್ಗಾ ಪೂಜೆ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಪೂಜೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಭಜನಾ ಕಾರ್ಯಕ್ರಮ ನೆರವೇರಿತು. ಮಂಡೆಕೋಲು
ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ,ಆಡಳಿತಾಧಿಕಾರಿ ರಮೇಶ ಪಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.