Home Uncategorized ಬೆಳ್ಳಾರೆ : ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ಬೋರ್ವೆಲ್ ಪಂಪನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಳ್ಳಾರೆ ಪೊಲೀಸರು

ಬೆಳ್ಳಾರೆ : ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ಬೋರ್ವೆಲ್ ಪಂಪನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬೆಳ್ಳಾರೆ ಪೊಲೀಸರು

0

ಬೆಳ್ಳಾರೆ ಪೊಲೀಸ್ ಠಾಣೆಯ ಮನುಗೌಡ ಮತ್ತು ಮಧು ಜಿ. ಡಿ ಯವರು ಸಂಜೆ ಗಸ್ತು ಕರ್ತವ್ಯದಲ್ಲಿ ಇರುವಾಗ, ಮುಕ್ಕೂರು ಬಳಿ ರಸ್ತೆ ಬದಿ ಬಿದ್ದಿದ್ದ ಬೋರ್ವೆಲ್ ಪಂಪ್ ಅನ್ನು ಗಮನಿಸಿ ಅಲ್ಲಿಯೇ ಇದ್ದ ಸಾರ್ವಜನಿಕರಿಗೆ ಮಾಹಿತಿ ನೀಡಿ ಪಂಪನ್ನು ಬೆಳ್ಳಾರೆ ಠಾಣೆಗೆ ತಂದು ಇಟ್ಟಿದ್ದರು.
ಈ ವಿಷಯ ತಿಳಿದ ಪಂಪ್ ಮಾಲೀಕರಾದ ಬೆಳ್ಳಾರೆ ಮಾತ ಎಲೆಕ್ಟ್ರಿಕಲ್ ನವರು ಇಂದು ಠಾಣೆಗೆ ಬಂದು ಮಾಹಿತಿ ನೀಡಿದ್ದು ಬಳಿಕ ಬೆಳ್ಳಾರೆ ಪಿ.ಎಸ್.ಐ. ಕಿಶೋರ್, ಪೊಲೀಸ್ ಉದಯಗೌಡ ಅವರು ಪರಿಶೀಲಿಸಿ ಮಾಲೀಕರಿಗೆ ಪಂಪ್ ಸೆಟ್ ನ್ನು ನೀಡಲಾಯಿತು.

NO COMMENTS

error: Content is protected !!
Breaking