ಕೊಡಿಯಾಲ: ಮಹಿಳೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ

0

ಮಹಿಳೆಗೂ ಬೆಂಕಿ ಹಚ್ಚಿದ ವ್ಯಕ್ತಿಗೂ ಗಂಭೀರ ಗಾಯ, ಸುಳ್ಯ ಆಸ್ಪತ್ರೆಗೆ ದಾಖಲು

ಕೊಡಿಯಾಲದ ಕಲ್ಲರ್ಪೆ ಎಂಬಲ್ಲಿ ಮಹಿಳೆಯ ಮೇಲೆ ವ್ಯಕ್ತಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು ಅದೇ ಬೆಂಕಿ ವ್ಯಾಪಿಸಿ ವ್ಯಕ್ತಿಗೂ ತಗುಲಿ ಇಬ್ಬರು ಗಂಭೀರ ಗಾಯಗೊಂಡ ಘಟನೆ ಅ.12 ರಂದು ನಡೆದಿದೆ.

ಘಟನೆ ಯಿಂದ ಗಂಭೀರ ಗಾಯಗೊಂಡಿರುವ ಇಬ್ಬರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ತಂದು ದಾಖಲಿಸಿದ್ದು ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.