ಬೆಳ್ಳಾರೆ : ಭಕ್ತಿ, ಸಂಭ್ರಮದ ಶ್ರೀ ಶಾರದೋತ್ಸವ – ಸಾಂಸ್ಕೃತಿಕ ಕಾರ್ಯಕ್ರಮ

0

ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ 37 ನೇ ವರ್ಷದ ಶ್ರೀ ಶಾರದೋತ್ಸವ ಕಾರ್ಯಕ್ರಮವು ಅ.12 ರಂದು ಬೆಳ್ಳಾರೆ ಅಚಲಾಪುರ ಕಟ್ಟೆ ಬಳಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿ,ಸಂಭ್ರಮದಿಂದ ನಡೆಯಿತು.
ಪೂರ್ವಾಹ್ನ ಶಾರದಾ ದೇವಿಯ ಪ್ರತಿಷ್ಠೆ,ಪೂಜೆ ನಡೆಯಿತು.


ನಂತರ ವಿದ್ಯಾರಂಭ ( ಅಕ್ಷರಾಭ್ಯಾಸ,)ಶಾರದಾ ಸಹಸ್ರನಾಮಾರ್ಚನೆ,ಅಷ್ಟೋತ್ತರನಾಮಾರ್ಚನೆ,ಆಯುಧ ಪೂಜೆ ಇತ್ಯಾದಿ ಸೇವೆಗಳು ನಡೆಯಿತು.
ಬೆಳಿಗ್ಗೆ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಗೌರಿಪುರಂ ಮತ್ತು ಅಜಪಿಲ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿ ಬೆಳ್ಳಾರೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಅಪರಾಹ್ನ ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ದೇವಿನಗರ ಕೊಳಂಬಳ ಹಾಗೂ ಶ್ರೀ ಜಲದುರ್ಗಾದೇವೀ ಭಜನಾ ಮಂಡಳಿ ಪೆರುವಾಜೆ ಇವರಿಂದ ಭಜನೆ ನಡೆಯಿತು.
ಸಂಜೆ ಫ್ಯೂಶನ್ ಇನ್ಸ್ಟಿಟ್ಯೂಟ್ ಆಫ್ ಡ್ಯಾನ್ಸ್ ಸುಳ್ಯ ಇವರಿಂದ “ನೃತ್ಯ ವೈಭವ” ಸೇರಿದ ಜನರನ್ನು ಮನರಂಜಿಸಿತು.


ರಾತ್ರಿ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ದೇವಿಯ ವಿವಿಧ ವೇಷ ಭೂಷಣಗಳೊಂದಿಗೆ,ವಾದ್ಯ ,ಘೋಷಗಳೊಂದಿಗೆ ವೈಭವದ ಶೋಭಾಯಾತ್ರೆ ಮುಖ್ಯರಸ್ತೆಯಲ್ಲಿ ನಡೆದು ಗೌರಿಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾರದೋತ್ಸವ ಸಮಿತಿ ಅಧ್ಯಕ್ಷ ಜಯರಾಮ ಉಮಿಕ್ಕಳ,ಸಂಚಾಲಕ ಸದಾಶಿವ ಮಣಿಯಾಣಿ ಪಡ್ಪು, ಕಾರ್ಯದರ್ಶಿ ಪ್ರಸಾದ್ ಆಚಾರ್ಯ ತಡಗಜೆ,ಕೋಶಾಧಿಕಾರಿ ಗಂಗಾಧರ ಪಾಟಾಳಿ ಪಡ್ಪು ಹಾಗೂ ಸಮಿತಿಯ ಸರ್ವಸದಸ್ಯರು ಮತ್ತು ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.