ಸುಳ್ಯ ಶ್ರೀ ರಾಮ ಮಂದಿರದ ಧರ್ಮದರ್ಶಿ ಮಂಡಳಿಯ ಮಹಾಸಭೆಯು ಅಧ್ಯಕ್ಷರಾದ ಕೆ.ಉಪೇಂದ್ರ ಪ್ರಭು ರವರ ಅಧ್ಯಕ್ಷತೆಯಲ್ಲಿ ಅ.13 ರಂದು ಮಂದಿರದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮುಂದಿನ ಸಾಲಿನ ಉಪಾಧ್ಯಕ್ಷರಾಗಿ ಕೃಷ್ಣ ಕಾಮತ್ ಅರಂಬೂರು, ಕಾರ್ಯದರ್ಶಿ ಶ್ರೀನಿವಾಸ ರಾವ್ ಸುಳ್ಯ, ಜತೆ ಕಾರ್ಯದರ್ಶಿ ಮಹಾಬಲ ಕೇರ್ಪಳ, ಸದಸ್ಯರನ್ನಾಗಿ ಬಾಬುರಾಯ ಕಾಮತ್, ವಾಸುದೇವ ನಾಯಕ್ ಕೇರ್ಪಳ, ಬೆಳ್ಯಪ್ಪ ಗೌಡ ಬಳ್ಳಡ್ಕ, ಗೋಪಾಲ ಎಸ್ ನಡುಬೈಲು, ಭಾಸ್ಕರ ನಾಯರ್, ಸಂದೇಶ್ ಕುರುಂಜಿ, ಪ್ರದೀಪ್ ಪ್ರಭು, ಸೌಮ್ಯ ಭಾರದ್ವಾಜ್, ನಮಿತರಾವ್ ಹಾಗೂ ಗೌರವ ಸಲಹೆಗಾರರಾಗಿ ಅಶೋಕ ಪ್ರಭು ಸುಳ್ಯ, ನಾರಾಯಣ ಕೇಕಡ್ಕ, ಶಶಿಧರ ಪಿಳ್ಳೆ,ವಿದ್ಯಾನಂದ ನಾವೂರು,ಬಂಗಾರು ಭಾರದ್ವಾಜ್ ರವರನ್ನು ಆಯ್ಕೆ ಮಾಡಲಾಯಿತು.