ಬಂದೂಕು ಪ್ರದರ್ಶಿಸಿದ ಯುವಕರು

0

ಕೈಕಂಬದ ಪೆಟ್ರೋಲ್‌ ಪಂಪೊಂದರ ಬಳಿ ಕಾರಿನಲ್ಲಿದ್ದ ತಂಡ ಗನ್ ನಂತೆ ಹೋಲುವ ವಸ್ತುವೊಂದನ್ನು ಪ್ರದರ್ಶಿಸಿ ಊರಿನವರು ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಬಂದು ಪ್ರಕರಣ ಸುಖಾಂತ್ಯಗೊಂಡ ಘಟನೆ ಅ.12 ರಂದು ನಡೆದಿದೆ.

ಕೈಕಂಬದ ಪೇಟೆ ಬಳಿ ವಸತಿ ಇರುವ ರಸ್ತೆಯಲ್ಲಿ ಕಾರಿನಲ್ಲಿದ್ದ ತಂಡವೊಂದು ಬಂದೂಕು ಹೋಲುವ ವಸ್ತು ಹೊಂದಿತ್ತು .ಕೆಲ ಹೊತ್ತಿನ ಬಳಿಕ ಸ್ಪೋಟದಂತೆ ಸದ್ದು ಕೇಳಿ ಜನರು ಗಮನಿಸಿದಾಗ ಕಾರಲ್ಲಿ ನಲ್ಲಿದ್ದವರು ಗನ್ ರೂಪದ ವಸ್ತು ತೋರಿಸುತ್ತಿರುವುದು ಕಂಡು ಬಂದಿದೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು. ಪೊಲೀಸರು ಬಂದು ಹೊಟೇಲೊಂದ್ದರಲ್ಲಿದ್ದವರನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಬಂದೂಕು ದಾರಿಗಳು ಬಳಸಿರುವ ಬಂದೂಕು ಪ್ರಾಣಿಗಳನ್ನು ಓಡಿಸುವ ಬಂದೂಕಾಗಿತ್ತೆನ್ನಲಾಗಿದ್ದು ಯಾವುದೇ ಕ್ರಮ ಕೈಗೊಳ್ಳದೇ ಬಿಡಲಾಯಿತು ಎಂದು ಪೊಲೀಸ್ ಮಾಹಿತಿಯಿಂದ ತಿಳಿದು ಬಂದಿದೆ.