ನಾಳೆ (ಅ.15) ವಿದ್ಯುತ್ ‌ನಿಲುಗಡೆ ಇಲ್ಲ : ಮೆಸ್ಕಾಂ ಪ್ರಕಟಣೆ

0

ಅ.15ರಂದು ಮಂಗಳವಾರ ವಿದ್ಯುತ್ ನಿಲುಗಡೆ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಅ.15ರಂದು ಸುಳ್ಯ ಮೆಸ್ಕಾಂ ವ್ಯಾಪ್ತಿಯ ವಿವಿಧ ಕಡೆ ದುರಸ್ತಿ ‌ಕಾರ್ಯದ ಪ್ರಯುಕ್ತ ವಿದ್ಯುತ್ ‌ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ಹೊರಡಿಸಿತ್ತು. ಆದರೆ ಕಾರಣಾಂತರಗಳಿಂದ ದುರಸ್ತಿ ಕಾರ್ಯವನ್ನು ಮುಂದೂಡಲಾಗಿದೆ. ನಾಳೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಇಲ್ಲ ಎಂದು ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕರು ಸುದ್ದಿಗೆ ತಿಳಿಸಿದ್ದಾರೆ.