ಶಾರದಾಂಬ ಸಮಿತಿ ವತಿಯಿಂದ ನಾಳೆಯಿಂದ ಅ.17 ರ ವರೆಗೆ ಮಧ್ಯಾಹ್ನವೂ ಅನ್ನಪ್ರಸಾದ ವಿತರಣೆಗೆ ನಿರ್ಧಾರ

0

ಸುಳ್ಯ ಚೆನ್ನಕೇಶವ ದೇವಳದ ಎದುರುಗಡೆ ನಡೆಯುವ ಶ್ರೀ ಶಾರದಾಂಬಾ ದಸರಾ ಉತ್ಸವದ ಸಂದರ್ಭ ಪ್ರತಿದಿನವೂ ರಾತ್ರಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ದಿನ ಹಗಲು ಕಾರ್ಯಕ್ರಮ ಇದ್ದುದರಿಂದ ರಾತ್ರಿಯ ಜತೆಗೆ ಮಧ್ಯಾಹ್ನವೂ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಹಗಲು ಕಾರ್ಯಕ್ರಮವಿಲ್ಲದ ಇಂದು, ನಾಳೆ ಮತ್ತು ನಾಡದು ಊಟದ ವ್ಯವಸ್ಥೆ ಇರುವುದಿಲ್ಲವೆಂದು ಪ್ರಕಟಿಸಲಾಗಿತ್ತು.
ಆದರೆ ಇಂದು ಮಧ್ಯಾಹ್ನ ಚೆನ್ನಕೇಶವ ದೇವಸ್ಥಾನದ ವತಿಯಿಂದ ಪ್ರತಿದಿನದಂತೆ ಊಟದ ವ್ಯವಸ್ಥೆ ಇದ್ದರೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದುದರಿಂದ ಅವರಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗದೆ ಸುಮಾರು ನೂರರಷ್ಟು ಮಂದಿ ಊಟ ಸಿಗದೆ ವಾಪಸ್ ಹೋಗಬೇಕಾಯಿತು. ಇದನ್ನು ಕಂಡ ಶ್ರೀ ಶಾರದಾಂಬ ದಸರಾ ಸಮಿತಿಯವರು ನಾಳೆಯಿಂದ ಸಮಿತಿ ವತಿಯಿಂದ ಮಧ್ಯಾಹ್ನದ ಊಟ ನೀಡಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
” ಅ.15, 16 ರಂದು ರಾತ್ರಿಯ ಊಟದ ಜತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮತ್ತು ಶೋಭಾಯಾತ್ರೆಯ ದಿನವಾದ ಅ.17 ರಂದು ಕೂಡ ಮಧ್ಯಾಹ್ನದ ಊಟ ಕೂಡ ನೀಡಲಾಗುವುದು. ಭಕ್ತಾದಿಗಳಾಗಿ ಬಂದವರಾರೂ ಊಟ ದೊರೆಯದೆ ವಾಪಸ್ ಹೋಗುವಂತಹ ಸಂದರ್ಭ ಸೃಷ್ಠಿಯಾಗಬಾರದೆಂಬ ಕಾರಣಕ್ಕಾಗಿ ಈ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ” ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಡಾ.ಡಿ.ವಿ.ಲೀಲಾಧರ್ ತಿಳಿಸಿದ್ದಾರೆ.