ಗೂನಡ್ಕ: ರಾತ್ರಿ ವೇಳೆ ಮನೆಯ ಗೇಟು ಮುರಿದು ಹಟ್ಟಿಯಿಂದ ದನ ಕಳವು

0

ಕಲ್ಲುಗುಂಡಿ ಹೊರಠಾಣೆಯಲ್ಲಿ ದೂರು ದಾಖಲು

ರಾತ್ರಿಯ ವೇಳೆ ಮನೆಯ ಗೇಟು ಮುರಿದು ಹಾಕಿದ ಗೋಕಳ್ಳರ ತಂಡ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ಸಾಕು ದನಗಳನ್ನು ಕಳವು ಮಾಡಿದ ಘಟನೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದ ಪೆಲ್ತಡ್ಕದಲ್ಲಿ ಅ.13ರಂದು ಸಂಭವಿಸಿದೆ.

ಗೂನಡ್ಕ ಪೆಲ್ತಡ್ಕದ ಎಸ್.ಪಿ. ಪದ್ಮನಾಭ ಪೆಲ್ತಡ್ಕ ಅವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಎರಡು ದನಗಳನ್ನು ಗೋಕಳ್ಳರು ಕಳವು ಮಾಡಿದ್ದು, ಮನೆಯ ಗೇಟು ಮುರಿದು ಹಾಕಿರುವುದಾಗಿ ತಿಳಿದುಬಂದಿದೆ.

ಅ.14ರಂದು ಬೆಳಿಗ್ಗೆ ಪದ್ಮನಾಭ ಅವರ ಪತ್ನಿ ಹಟ್ಟಿಯಲ್ಲಿ ದನಕ್ಕೆ ಹುಲ್ಲು ಹಾಕಲು ಬಂದ ವೇಳೆ ಎರಡು ದನಗಳು ಹಟ್ಟಿಯಲ್ಲಿ ಇರಲಿಲ್ಲವೆನ್ನಲಾಗಿದೆ. ಕೂಡಲೇ ಅವರು ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ಹಟ್ಟಿಯ ಬಳಿ ಗೋಕಳ್ಳರು ಬಂದ ವಾಹನದ ಚಕ್ರದ ಗುರುತು ಇರುವುದಾಗಿ ತಿಳಿದುಬಂದಿದೆ.


ಈ ಬಗ್ಗೆ ಎಸ್.ಪಿ. ಪದ್ಮನಾಭ ಅವರು ಕಲ್ಲುಗುಂಡಿ ಪೊಲೀಸ್ ಹೊರಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.