ಪಂಜದ ಕುದ್ವದಲ್ಲಿ ಚಿರತೆ ಹೆಜ್ಜೆ ಪತ್ತೆ!

0

ಕೂತ್ಕುಂಜ ಗ್ರಾಮದ ಕುದ್ವ ಎಂಬಲ್ಲಿ ತೋಟದಲ್ಲಿ ಚಿರತೆ ಹೆಜ್ಜೆ ಗುರುತು ಅ.16 ರಂದು ಪತ್ತೆಯಾಗಿದೆ.


ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಜ್ಜೆ ಗಾತ್ರ ದೊಡ್ಡದಾಗಿ ಇರುವುದರಿಂದ ಗಂಡು ಚಿರತೆ ಆಗಿರುವ ಸಾಧ್ಯತೆ ಇದೆ ಎಂದು ಇಲಾಖೆಯವರು ತಿಳಿಸಿದ್ದಾರೆ.

ಬಂಟಮಲೆಯ ಕಾಡಿನ ಹತ್ತಿರ ಕುದ್ವ ಇರುವುದರಿಂದ ಆಲ್ಲಿಂದ ಬಂದಿರ ಬಹುದು ಎನ್ನಲಾಗಿದೆ.