ತುಳಸಿ ಗಿಡದಲ್ಲಿ ದಾಸವಾಳ ಹೂ ಅರಳಿದೆ – ಅಜ್ಜಾವರದಲ್ಲೊಂದು ವಿಸ್ಮಯ..!

0

ತುಳಸಿ ಗಿಡದಲ್ಲಿ ದಾಸವಾಳ ಹೂ ಅರಳಿದೆ. ಹೀಗೊಂದು ವಿಸ್ಮಯ ಅಜ್ಜಾವರ ಗ್ರಾಮದ ಶಾಂತಿಮಜಲಿನ ಮನೆಯೊಂದರಲ್ಲಿ ಕಂಡು ಬಂದಿದೆ.

ಶಾಂತಿಮಜಲು ಹರಿಣಿಯವರ ಮನೆಯ ಅಂಗಳದ ಬದಿಯಲ್ಲಿರುವ ಮೂರು ತುಳಸಿ ಗಿಡಗಳಲ್ಲಿ ಎರಡರಲ್ಲಿ ಬಿಳಿ ದಾಸವಾಳ‌ ಹೂ ಇಂದು ಅರಳಿದೆ. ಇನ್ನೊಂದು ಗಿಡದಲ್ಲಿ ದಾಸವಾಳದ ಮುಗ್ಗು ಇದೆ. ಕಳೆದ ಒಂದು‌ ವಾರದಲ್ಲಿ ಮೂರನೇ ಬಾರಿಗೆ ತುಳಸಿ ಗಿಡದಲ್ಲಿ ದಾಸವಾಳ ಹೂ ಅರಳಿದೆ ಎನ್ನುತ್ತಾರೆ ಮನೆಯವರು.

ಈ ತುಳಸಿ ಗಿಡದ ಪಕ್ಕದಲ್ಲೇ ದಾಸವಾಳ ಗಿಡವಿದ್ದು ಪರಾಗಸ್ಪರ್ಶ ದಿಂದ ಹೂ ಬಿಟ್ಟಿರಬಹುದೆಂದು ವಿಸ್ಮಯ ತಿಳಿದು ಹೂ ನೋಡಲು ಬರುತ್ತಿರುವ ಜನರು ಹೇಳುತ್ತಾರೆ.