ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಸಿಬ್ಬಂದಿ ವರ್ಗದವರ ಜಂಟಿ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕಿರಿಯ ಬಾಲಕ ಮತ್ತು ಬಾಲಕಿಯರ ಹಾಗೂ 16 ವರುಷ ಮೇಲ್ಪಟ್ಟ ಮುಕ್ತ ರ್‍ಯಾಪಿಡ್ ಚೆಸ್ ಪಂದ್ಯಾಟ ಮತ್ತು ಮುಕ್ತ ಡಬಲ್ಸ್ ಕೇರಂ ಪಂದ್ಯಾಟ ಉತ್ಕರ್ಷ ಸಹಕಾರ ಟ್ರೋಫಿ -2024 ನ.1 ರಂದು ಮುಂಜಾನೆಯಿಂದ ಸಂಘದ ಕಲ್ಲೇಗ ಪೂವಣಿ ಹೆಗ್ಡೆ ಸಭಾ ಭವನದಲ್ಲಿ ನಡೆಯಲಿದೆ.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಅ.18 ರಂದು ಸಂಘದಲ್ಲಿ ನಡೆಯಿತು. ಪಂಜದ ಮೆಸ್ಕಾಂ ಸಿಬ್ಬಂದಿ ಸದಾಶಿವ ಸಂಪ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.
ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ಬಿ, ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ, ನಿರ್ದೇಶಕರಾದ ಲಿಗೋಧರ ಆಚಾರ್ಯ ಯನ್, ಚಿನ್ನಪ್ಪ ಗೌಡ ಚೊಟ್ಟೆಮಜಲು , ವಾಚಣ್ಣ ಕೆರೆಮೂಲೆ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ, ಚೆಸ್ ಸಂಘಟಕ ಮಹೇಶ್ ಕೋಟೆ, ಕ್ಯಾಂಪ್ಕೋ ಪಂಜ ಶಾಖೆಯ ಮುಖ್ಯಸ್ಥ ಅನಂತಕೃಷ್ಣ ಭಟ್ , ಪಲ್ಲೋಡಿ ಶ್ರೀ ಉಳ್ಳಾಕುಲು ಕಲಾ ರಂಗದ ಪೂರ್ವಾಧ್ಯಕ್ಷ ಪ್ರಕಾಶ್ ಜಾಕೆ, ಸಂಘದ ಸಿಬ್ಬಂದಿಗಳು , ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಂದ್ರಶೇಖರ ಇಟ್ಯಡ್ಕ ಸ್ವಾಗತಿಸಿದರು.ಲೋಹಿತ್ ಎಣ್ಣೆಮಜಲು ವಂದಿಸಿದರು.