ಗ್ರಾಮಸ್ಥರಿಂದ ವನ್ಯ ಜೀವಿಗಳ ಹಾವಳಿ , ನೆಟ್ವರ್ಕ್ ಹಾಗೂ ವಿದ್ಯುತ್ ಸಮಸ್ಯೆಗಳ ಬಗ್ಗೆ ಸಾರ್ವಜನಿಕ ಅಹವಾಲು ಸ್ವೀಕಾರ
ಕರ್ನಾಟಕ ಸರ್ಕಾರದ ರಾಜ್ಯ ವನ್ಯಜೀವಿ ಸಂರಕ್ಷಣಾ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರು ಕೊಡಗು ಸಂಪಾಜೆಗೆ ಅ.22ರಂದು ಭೇಟಿ ನೀಡಿ ಗ್ರಾಮಸ್ಥರಿಂದ ವನ್ಯ ಜೀವಿಗಳ ಸಮಸ್ಯೆಗಳ ಬಗ್ಗೆ ಹಾಗೂ ಸ್ಥಳೀಯ ನೆಟ್ವರ್ಕ್ ಹಾಗೂ ವಿದ್ಯುತ್ ಸಮಸ್ಯೆ ಕುರಿತು ಸಾರ್ವಜನಿಕ ಅಹವಾಲು ಸ್ವೀಕರಿಸಿದರು.
ಬಳಿಕ ಕೊಡಗು ಸಂಪಾಜೆ, ಪೆರಾಜೆ, ಚೆಂಬು ಗ್ರಾಮದ ಆನೆ , ಮಂಗ, ಸೇರಿದಂತೆ ವನ್ಯ ಜೀವಿಗಳಿಂದ ಕೃಷಿಕರು ಅನುಭವಿಸುತ್ತಿರುವ ಕೃಷಿ ಸಮಸ್ಯೆ ಹಾಗೂ ವಿದ್ಯುತ್ , ನೆಟ್ ವರ್ಕ್ ಹಾಗೂ ಇತರ ಮೂಲಭೂತ ಸಮಸ್ಯೆಗಳನ್ನು ಗ್ರಾಮಸ್ಥರು ಹೇಳಿಕೊಂಡು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಪಾಜೆ ಪಯಸ್ವಿನಿ ಸಹಕಾರ ಸಂಘದ ನಿರ್ದೇಶಕರ ಗಣಪತಿ , ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನಾ ಅನುಷ್ಠಾನ ಸದಸ್ಯ ಸುರೇಶ್ ಪಿ.ಎಲ್, ಸಂಪಾಜೆ ವಲಯ ಅರಣ್ಯ ಅಧ್ಯಕ್ಷ ಕೆ.ಕೆ. ವಿಜಯ ಕುಮಾರ್ ಕನ್ಯಾನ ,ಗ್ಯಾರಂಟಿ ಯೋಜನಾ ಅನುಷ್ಠಾನದ ಸದಸ್ಯ ಪರಮಲ ಗಣೇಶ್ , ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನಾ ಅನುಷ್ಠಾನ ಸದಸ್ಯ ಮನು ಪೆರುಮುಂಡ, ಮಡಿಕೇರಿ ಎ.ಸಿ.ಎಫ್. ಮೊಯಿದ್ದೀನ್ ಪಾಷಾ , ಕೊಡಗು ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷ ಸೂರಜ್ ಹೊಸೂರು,
ಮಡಿಕೇರಿ ಅಕ್ರಮ ಸಕ್ರಮ ಸದಸ್ಯರು ತುಳಸಿ ಗಾಂಧಿ ಪ್ರಸಾದ್, ಚೆಂಬು ವಲಯ ಕಾಂಗ್ರೆಸ್ ಅಧ್ಯಕ್ಷ
ರವಿರಾಜ್ ಹೊಸೂರು, ಸಂಪಾಜೆ ಬೂತ್ ಅಧ್ಯಕ್ಷ ರಿತಿನ್ ಡೆಮ್ಮಲೆ, ಮಾಜಿ ಗ್ರಾಂ.ಪಂ ಅಧ್ಯಕ್ಷ ಮೊಯಿ ದ್ದೀನ್ ಕುಂಞಿ , ಕಾಂಗ್ರೆಸ್ ಮುಖಂಡ ತಿರುಮಲ ಸೋನ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹನೀಫ್ ಕೊಯನಾಡು , ಚೆಂಬು ಗ್ರಾಂ.ಪಂ ಸದಸ್ಯ ಗಿರೀಶ್ ಹೊಸೂರು, ರಾಜೇಶ್ ಕುದ್ಕುಳಿ, ಸುಧೀರ್ ಹೊದ್ದೆಟ್ಟಿ , ಜಯರಾಮ ಪೆರುಮುಂಡ, ಹರಪ್ರಸಾದ್ ಪೆರಂಗಜೆ, ಪಾರ್ಶ್ವನಾಥ ಪೆರುಮುಂಡ, ಅರಣ್ಯ ಇಲಾಖೆ ಅಧಿಕಾರಿ -ಸಿಬ್ಬಂದಿವರ್ಗ , ಕಂದಾಯ ಇಲಾಖೆ ಅಧಿಕಾರಿ – ಸಿಬ್ಬಂದಿ ವರ್ಗ, ಹಾಗೂ ಸಂಪಾಜೆ, ಚೆಂಬು, ಪೆರಾಜೆ ಗ್ರಾಮಸ್ಥರು ಉಪಸ್ಥಿತರಿದ್ದರು.