














ಅರಂತೋಡು ತೆಕ್ಕಿಲ್ ಸಭಾ ಭವನ ಸಮೀಪ ಮಾಣಿ ಮೈಸೂರು ಹೆದ್ದಾರಿ ತಿರುವಿನಲ್ಲಿ ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿ ಪಲ್ಟಿಯಾದ ಘಟನೆ ಅ. 25 ರಂದು ರಾತ್ರಿ ವರದಿಯಾಗಿದೆ. ಘಟನೆಯಿಂದ ಲಾರಿ ಜಖಂಗೊಂಡಿದ್ದು ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.










