ಜಯನಗರ ಶಾಲೆಯ ಬಳಿ ರಸ್ತೆಯ ಅವ್ಯವಸ್ಥೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಒಂದು ಗುಂಡಿಗೆ ಬಿದ್ದಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಹಳೆಗೇಟಿನಿಂದ ಜಯನಗರ ಶಾಲೆಯ ಕಡೆ ಬರುತ್ತಿದ್ದ ಜೀಪು ಮುಂಭಾಗದಿಂದ ಬರುತ್ತಿದ್ದ ವಾಹನಕ್ಕೆ ಸೈಡು ನೀಡಲು ಹೋಗಿ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ. ಘಟನೆಯಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ಜೀಪಿನ ಮುಂಭಾಗ ಅಲ್ಪ ಸ್ವಲ್ಪ ಜಖಂ ಉಂಟಾಗಿದೆ.
ಇದಕ್ಕೆ ಮುಖ್ಯ ಕಾರಣ ಈ ಭಾಗದ ರಸ್ತೆಯ ಅವ್ಯವಸ್ಥೆ. ಇಲ್ಲಿ ಕಳೆದ ಭಾರಿ ಕುಡಿಯುವ ನೀರಿನ ಯೋಜನೆಗೆ ಪೈಪ್ ಅಳವಡಿಸಲು ತೆಗದ ಗುಂಡಿಯನ್ನು ಸಂಭಂದಪಟ್ಟವರು ಸರಿಯಾಗಿ ಮುಚ್ಚದೇ ಹೋಗಿದ್ದು,ರಸ್ತೆಯೂ ಕೂಡ ಕಡಿಮೆ ವಿಸ್ತೀರ್ಣ ದಿಂದ ಕೂಡಿರುವ ಕಾರಣ ಈ ರೀತಿಯ ಸಮಸ್ಯೆಗೆ ಕಾರಣ ವಾಗುತ್ತಿದೆ.
ಇದರ ಬಗ್ಗೆ ಸುದ್ದಿ ಪತ್ರಿಕೆಯಲ್ಲಿ ಹಲವಾರು ಬಾರಿ ವರದಿಯನ್ನು ಹಾಕಲಾಗಿದ್ದರು ಸಂಭಂದಪಟ್ಟವರು ಇತ್ತ ಗಮನಹರಿಸುತ್ತಿಲ್ಲ.