ಪಂಜ ಲಯನ್ಸ್ ಕ್ಲಬ್ ವತಿಯಿಂದ ಎಣ್ಮೂರು ಪ್ರೌಢ ಶಾಲೆ ಮತ್ತು ಪಂಜ ಮೊರಾರ್ಜಿ ಶಾಲೆಯಲ್ಲಿ ತರಬೇತಿ ಕಾರ್ಯಾಗಾರ

0

ಪಂಜ ಲಯನ್ಸ್ ಕ್ಲಬ್ ಮತ್ತು ಸರಕಾರಿ ಪ್ರೌಢ ಶಾಲೆ ಎಣ್ಮೂರು ನಿಂತಿಕಲ್ಲು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಎರಡು ಕಡೆ ವೃತಿ ಪರ ಅವಕಾಶಗಳ ಬಗ್ಗೆ ಪ್ರತ್ಯೇಕ ಕಾರ್ಯಕ್ರಮಗಳು ಅ.24 ರಂದು ನಡೆಯಿತು.

ಪೂರ್ವಹ್ನ ಎಣ್ಮೂರು ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಾಲಾ ಮುಖ್ಯ ಗುರುಗಳಾದ ಟೈಟಸ್ ವರ್ಗಿಸ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿ ಲಯನ್ಸ್ ಜಿಲ್ಲೆ 317 ಇದರ ಸ್ಪರ್ಧಾತ್ಮಕ ಪರೀಕ್ಷೆಗಳ ಮುಖ್ಯ ಸಂಯೋಜಕ ಸುರೇಶ್ ಎಂ ಎಸ್ Pmjf ಇವರು ವಿದ್ಯಾರ್ಥಿಗಳಿಗೆ ವೃತಿಪರ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಅಧ್ಯಕ್ಷತೆ ವಹಿಸಿದ್ದರು.


ಕಾರ್ಯಕ್ರಮದಲ್ಲಿ ಲಯನ್ಸ್ ಸದಸ್ಯ, ಶಿಕ್ಷಕ ಮೋಹನ್ ಎಣ್ಮೂರು ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾರ್ಯದರ್ಶಿ ಮೋಹನ್ ದಾಸ್ ಕೂಟಾಜೆ ವಂದಿಸಿದರು. ಕೋಶಾಧಿಕಾರಿ ಸುರೇಶ್ ನಡ್ಕ ಮತ್ತು ವಾಸುದೇವ ಮೆಲ್ಪಾಡಿ ಉಪಸ್ಥಿತರಿದ್ದರು.

ಅಪರಾಹ್ನ ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಿಕ್ಷಕ ರವೀಂದ್ರ ನಾಯಕ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಲಯನ್ಸ್ ಜಿಲ್ಲಾ ಮುಖ್ಯ ಸಂಯೋಜಕ ಸುರೇಶ್ ಎಂ ಎಸ್ ಮಾಹಿತಿ ನೀಡಿದರು. ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ ಅಧ್ಯಕ್ಷತೆ ವಹಿಸಿದ್ದರು .
ಕಾರ್ಯದರ್ಶಿ ಮೋಹನ್ ದಾಸ್ ಕುಟಾಜೆ ವಂದಿಸಿದರು. ಕೋಶಾಧಿಕಾರಿ ಸುರೇಶ್ ನಡ್ಕ ಲಯನ್ಸ್ ಸದಸ್ಯರಾದ ಕೇಶವ ಕುದ್ವ,,ಆನಂದ ಜಳಕಹೊಳೆ ಮತ್ತು ಪುರಂದರ ಪನ್ಯಾಡಿ ಉಪಸ್ಥಿತರಿದ್ದರು.