ಅರಂತೋಡು ಗ್ರಾಮ ಪಂಚಾಯತ್ , ದುರ್ಗಾ ಫ್ರೆಂಡ್ಸ್ ಅರಂತೋಡು ಸಹಯೋಗದೊಂದಿಗೆ ಮತ್ತು ಊರಿನ ನಾಗರೀಕರ ಸಹಕಾರದಿಂದ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 66ನೇ ರಾಷ್ಟ್ರೀಯ ಸ್ವಚ್ಚತಾ ಕಾರ್ಯಕ್ರಮವು ಅ.27 ರಂದು ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯ ಸದಸ್ಯರು, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ನ ಪದಾಧಿಕಾರಿಗಳು, ಸ್ವಚ್ಛತಾ ತಂಡದ ಸದಸ್ಯರು, ಗ್ರಾಮ ಪಂಚಾಯಿತ್ ಸಿಬ್ಬಂದಿ ವರ್ಗದವರು ಹಾಗೂ ಅರಂತೋಡು ಪೇಟೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಪಂಚಾಯತ್ ಸ್ವಚ್ಛತಾ ವಾಹನ ದುರಸ್ತಿಯಲ್ಲಿ ಇರುವುದರಿಂದ ಉದ್ಯಮಿ ನಿತ್ಯಾನಂದ ಚನ್ನಡ್ಕರವರು ತಮ್ಮ ಪಿಕಪ್ ವಾಹನವನ್ನು ನೀಡಿ ಸಹಕರಿಸಿದರು.