ವಿಟ್ಲ ಯಕ್ಷೋತ್ಸವದಲ್ಲಿ ಜನಮನ್ನಣೆ ಪಡೆದ ಪಂಜ ಶ್ರೀ ಶಾರದಾಂಬ ಯಕ್ಷಗಾನ ಅಧ್ಯಯನ ಕೇಂದ್ರದ ಮಕ್ಕಳ ಯಕ್ಷಗಾನ

0

ವಿಟ್ಲ ಚಂದಳಿಕೆಯಲ್ಲಿ ಅ. 27 ರಂದು ನಡೆದ ವಿಟ್ಲ ಯಕ್ಷೋತ್ಸವ ದಲ್ಲಿ ಬಾಲಕೃಷ್ಣ ಗೌಡ ಪುತ್ಯ ಇವರ ಸಾರಥ್ಯದ ಶ್ರೀ ಶಾರದಾಂಭ ಯಕ್ಷಗಾನ ಅಧ್ಯಯನ ಕೇಂದ್ರ ಕಲಾಕ್ಷೇತ್ರ ಪಂಜ ಇಲ್ಲಿನ ಮಕ್ಕಳ ಯಕ್ಷಗಾನ ಕುಶ ಲವ ಪ್ರದರ್ಶನವಾಗಿ ಜನಮನ್ನಣೆ ಗಳಿಸಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಶಾಶಂಕ ಎಲಿಮಲೆ ಮತ್ತು ರಚನ ಚಿದ್ಗಲ್,
ಚಂಡೆಯಲ್ಲಿ ಲಕ್ಷ್ಮೀಶ ಶಗ್ರೀತ್ತಾಯ ಪಂಜ, ಮದ್ದಲೆಯಲ್ಲಿ ಹರೀಶ್ ರೈ ಇಚಿಲಂಪಾಡಿ, ಚಕ್ರತಾಳದಲ್ಲಿ ಹರ್ಷೀತ್ ಬಾಳುಗೋಡು,
ಶತ್ರುಘ್ನನಾಗಿ ವಿನ್ಯಾಸ್ ಜಾಕೆ,
ಧಮನನಾಗಿ ಭವಿತ್ ಕಡೋಡಿ,
ಪುಷ್ಕಳಳಾಗಿ ಗಗನ್ ಬಿ.ಯಮ್
ಲವನಾಗಿ ಚೇತನ್ ಡೆಕ್ಕಳ,
ವಟುವಾಗಿ ತನುಷ್ ಕಡೋಡಿ, ಮನ್ವಿತ್ ಕರಿಮಜಲು,
ಕುಶನಾಗಿ ನಿನಾದ್ ದೇವರಮಜಲು,
ಲಕ್ಷ್ಮಣನಾಗಿ ತನ್ಮಯಿ ಆಳ್ವ,
ರಾಮನಾಗಿ ಧೃತಿ ಕುಚ್ಚಾಲ,
ದೂತನಾಗಿ ಶ್ರೀನಿವಾಸ ಕೋಡ್ತುಗುಳಿ,
ಸೀತೆಯಾಗಿ ಜ್ಞಾನಶ್ರೀ ಕೋಡ್ತುಗುಳಿ,
ವಾಲ್ಮೀಕಿಯಾಗಿ ಕಾರ್ತಿಕ್ ನೆಕ್ಕಿಲ ಪಾತ್ರ ನಿರ್ವಹಿಸಿದರು.

ಯಕ್ಷಮಣಿ ಗಿರೀಶ್ ಗಡಿಕಲ್ಲು ನಿರ್ದೇಶಿಸಿದ್ದರು.