ಸರ್ಫಾ ಕೋಟ್ಸ್ ಪೈಂಟ್ಸ್ ರವರಿಂದ ಪೈಂಟರ್ಸ್ ಮೀಟ್ ಕಾರ್ಯಕ್ರಮ
ಸುಳ್ಯ ತಾಲೂಕು ಯುವಶಕ್ತಿ ಪೈಂಟರ್ಸ್ ಅಸೋಸಿಯೇಷನ್ ಇದರ ಮಹಾಸಭೆ ಹಾಗೂ ಸರ್ಫಾ ಕೋಟ್ಸ್ ಪೈಂಟ್ಸ್ ಕಂಪನಿಯವರ ಪೈಂಟರ್ಸ್ ಮೀಟ್ ಕಾರ್ಯಕ್ರಮ ಅ.28 ರಂದು ಸುಳ್ಯ ಸಿ.ಎ.ಬ್ಯಾಂಕಿನ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪೈಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಕಾಯರ್ತೋಡಿ ಯವರು ವಹಿಸಿದ್ದರು. ಕಾನೂನು ಸಲಹೆಗಾರ
ನ್ಯಾಯವಾದಿ ಹರೀಶ್ ಬೂಡುಪನ್ನೆ ಯವರು ಸಂಘದ ಬೈಲಾದಲ್ಲಿರುವ ಕೆಲವು ವಿಚಾರಗಳನ್ನು ಪ್ರಸ್ತುತ ಪಡಿಸಿ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಟ್ಟೆಕ್ಕಾರ್ ಪೈಂಟ್ಸ್ ಮಾಲಕ ಸರ್ಫ್ವಾನ್ ಕಟ್ಟೆಕ್ಕಾರ್, ಸರ್ಫಾ ಕೋಟ್ಸ್ ಪೈಂಟ್ಸ್ ಕಂಪೆನಿಯ ಮ್ಯಾನೇಜರ್ ಕೆ.ಜಿ.ಎನ್.ಭಂಡಾರಿ, ಅಸೋಸಿಯೇಷನ್ ಗೌರವಾಧ್ಯಕ್ಷ ವಸಂತ ರೈ ಜಯನಗರ ಉಪಸ್ಥಿತರಿದ್ದರು.
ಬಳಿಕ ಮುಂದಿನ ಮೂರು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳು ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಗೌರವಾಧ್ಯಕ್ಷರಾಗಿ ವಸಂತ ರೈ ಜಯನಗರ, ಅಧ್ಯಕ್ಷರಾಗಿ ಜಗದೀಶ್
ಕಾಯರ್ತೋಡಿ ಯವರನ್ನು ಸರ್ವಾನುಮತದಿಂದ ಪುನರಾಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಕಬೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ, ಜತೆ ಕಾರ್ಯದರ್ಶಿ ಸಲೀಂ ಗೂನಡ್ಕ, ಬಾಲಚಂದ್ರ ನರಂದಗುಳಿ, ಕೋಶಾಧಿಕಾರಿ ರಾಕೇಶ್ ಅಡ್ಕಾರ್, ನಿರ್ದೇಶಕರಾಗಿ ಗೋಪಾಲಕೃಷ್ಣ ಗೂನಡ್ಕ, ಹೇಮಂತ್ ಕಲ್ಲುಗುಂಡಿ, ಶ್ರೀಕಾಂತ್ ತಳ್ಳೂರು, ಪ್ರವೀಣ್ ನಾರ್ಣಕಜೆ, ಲೋಹಿತಾಶ್ವ ಪರಮಂಡಲ, ಚಂದ್ರಶೇಖರ ಮೇನಾಲ,ಲೋಕೇಶ್ ಕುರುಂಜಿಗುಡ್ಡೆ, ಪ್ರಶಾಂತ್ ಸುಳ್ಯ, ಜಗದೀಶ್ ಜಯನಗರ, ಅಶ್ರಫ್ ಕಲ್ಲುಗುಂಡಿ, ವಿಶ್ವತೀರ್ಥ ಅಜ್ಜಾವರ, ರವಿ ಅಡ್ಯಡ್ಕ, ಲಿಖಿನ್ ಅರಂತೋಡು, ಮಹೇಶ್ ಕುದ್ಪಾಜೆ, ಚಿದಾನಂದ ದೊಡ್ಡೇರಿ, ಫಾರೂಕ್ ಗಾಂಧಿನಗರ, ಕೌಶಿಕ್ ಬಾಳುಗೋಡು, ಗಣೇಶ್ ಮಂಡೆಕೋಲು, ಮಹೇಂದ್ರ ಭಸ್ಮಡ್ಕ,ಕಾರ್ತಿಕ್ ಬೀರಮಂಗಲ, ಭಾನುಪ್ರಕಾಶ್ ಜಟ್ಟಿಪಳ್ಳ, ಚಂದ್ರಶೇಖರ ಜಟ್ಟಿಪಳ್ಳ, ಮೋಹನ್ ಅಡೂರು, ಈಶ್ವರ ನಾಯಕ್ ಕೇರ್ಪಳ ರವರನ್ನು ನಿರ್ದೇಶಕರನ್ನಾಗಿ ಹಾಗೂ ಕ್ರೀಡಾ ಸಂಚಾಲಕರಾಗಿ ಆಸೀಫ್ ಜಯನಗರ, ಸಹ ಸಂಚಾಲಕರಾಗಿ ಹಿಮಾಂಶು ಪರಮಂಡಲ, ಜೀವನ್ ಕುರುಂಜಿಭಾಗ್ ರವರನ್ನು ಆಯ್ಕೆ ಮಾಡಲಾಯಿತು. ಕಟ್ಟೆಕ್ಕಾರ್ ಪೈಂಟ್ಸ್ ಮ್ಯಾನೇಜರ್
ಮಹಮ್ಮದ್ ತಾಹಾ ಮತ್ತು ಲೋಹಿತಾಶ್ವ ಪರಮಂಡಲ ಕಾರ್ಯಕ್ರಮ ನಿರೂಪಿಸಿದರು.
ಸಭೆಯ ನಂತರ ಸರ್ಫಾ ಕೋಟ್ಸ್ ಪೈಂಟ್ಸ್ ಕಂಪೆನಿಯವರ ಪೈಂಟರ್ಸ್ ಮೀಟ್ ಕಾರ್ಯಕ್ರಮವು ನಡೆಯಿತು.
ಕಂಪೆನಿಯ ಮೆನೇಜರ್ ಕೆ.ಜಿ.ಎನ್.ಭಂಡಾರಿ ಯವರು ಪೈಂಟರ್ಸ್ ಗಳಿಗೆ ಪೈಂಟ್ ನ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಕಂಪನಿಯ ಸಿಬ್ಬಂದಿಗಳಾದ ಗಿರೀಶ್ ಕುಮಾರ್ ಮತ್ತು ರವಿಕಿರಣ್ ಪೈ ಯವರು ಸಹಕರಿಸಿದರು. ಆಗಮಿಸಿದ ಎಲ್ಲಾ ಪೈಂಟರ್ಸ್ ನವರಿಗೆ ಕಂಪೆನಿ ವತಿಯಿಂದ ಗಿಫ್ಟ್ ಮತ್ತು ಟೀ ಶರ್ಟ್, ಕ್ಯಾಪ್ ವಿತರಿಸಲಾಯಿತು. ಸುಮಾರು 200 ಕ್ಕೂ ಮಿಕ್ಕಿ ಪೈಂಟರ್ಸ್ ಅಸೋಸಿಯೇಷನ್ ಸದಸ್ಯರು ಭಾಗವಹಿಸಿದರು.
ಸರ್ಫಾ ಕೋಟ್ಸ್ ಪೈಂಟ್ಸ್ ನ ಸುಳ್ಯದ ಅಧಿಕೃತ ಡೀಲರ್ ಕಟ್ಟೆಕ್ಕಾರ್ ಪೈಂಟ್ಸ್ ನ ಸಿಬ್ಬಂದಿಗಳು ಸಹಕರಿಸಿದರು.