ಮೆಟ್ಟಿನಡ್ಕ ಸ.ಕಿ.ಪ್ರಾ. ಶಾಲೆಯ ನೂತನ ಎಸ್. ಡಿ. ಎಂ.ಸಿ.ಗೆ ಪದಾಧಿಕಾರಿಗಳ ಆಯ್ಕೆ ಅ.29 ರಂದು ನಡೆಯಿತು.
ನೂತನ ಅಧ್ಯಕ್ಷರಾಗಿ ರಮೇಶ. ಪಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಮತಿ ಹರಿಣಾಕ್ಷಿ ಗುಡ್ಡೆಮನೆ, ಸಮಿತಿಯ ಸದಸ್ಯರುಗಳಾಗಿ ರವಿ.ಜಿ, ಶೋಭ, ಪರಮೇಶ್ವರಿ, ಮೇದಪ್ಪ. ಜಿ, ಜಯ ಪ್ರಕಾಶ, ಕೆ,ಪದ್ಮನಾಭ, ಎಸ್.ಸತೀಶ, ಇಂದ್ರೇಶ್. ಜಿ, ಹರಿಣಾಕ್ಷಿ.ಬಿ.ಎಚ್, ಸುಮಿತ್ರಾ. ಕೆ, ನಳಿನಿ. ಎಸ್, ರೇವತಿ. ಪಿ, ಜಯಂತಿ, ಚಂದ್ರಕಾಂತ ಬಿ.ಎಚ್, ನವೀನ ಮೆಟ್ಟಿನಡ್ಕ, ಶಿಲ್ಪಾ, ಆಯ್ಕೆಯಾದರು.















ಪದನಿಮಿತ್ತ ಸದಸ್ಯ ರಾಗಿ ಶ್ರೀಮತಿ ಗೀತಾಲಕ್ಷ್ಮಿ ಎ ಮುಖ್ಯ ಶಿಕ್ಷಕರು, ಜಯಶ್ರೀ.ಕೆ.ಪಿ, ಆರೋಗ್ಯ ಕಾರ್ಯಕರ್ತೆ, ಕಮಲ ಕೆ, ಅಂಗನವಾಡಿ ಕಾರ್ಯಕರ್ತೆ, ನಾಮನಿರ್ದೇಶಿತ ಸದಸ್ಯರಾಗಿ ಶ್ರೀಮತಿ ಅನಿತಾ ಕುಮಾರಿ ಸ್ಥಳೀಯ ಜನಪ್ರತಿನಿಧಿ, ರೇವತಿ. ಪಿ ಅತಿಥಿ ಶಿಕ್ಷಕರು, ಮನುಷ್. ಬಿ.ಎಚ್ ಶಾಲಾ ವಿದ್ಯಾರ್ಥಿ ನಾಯಕ ಇವರು ಆಯ್ಕೆಯಾದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ಶ್ರೀಮತಿ ಅನಿತಾ ಕುಮಾರಿ, ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಾಲಾ ಶಿಕ್ಷಕರು ಪೋಷಕರು ಉಪಸ್ಥಿತರಿದ್ದರು.









