ಅಮರ ಪಡ್ನೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್ ಡಿ ಎಂ ಸಿ ರಚನಾ ಸಭೆ ಅಕ್ಟೋಬರ್ 30 ರಂದು ನಡೆಯಿತು. ಸಭೆಯಲ್ಲಿ ನೂತನ ಅವಧಿಗೆ 18 ಸದಸ್ಯರನ್ನು ಸೂಚಿಸುವ ಮತ್ತು ಅನುಮೋದಿಸುವ ಪ್ರಕ್ರಿಯೆಯಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಈಶ್ವರಕಾಯರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಗೀತಾ ಎಂ ಕೆ, ಇವರನ್ನು ಆಯ್ಕೆ ಮಾಡಲಾಯಿತು. ಸದಸ್ಯರಾಗಿ ದೇವಕಿ, ಗೀತಾ ಎಸ್, ವಿಮಲಾ, ಮೋಹಿನಿ ಕೆ, ರೇಖಾ ಎಸ್, ಸುನೀತಾ ಕೆ, ರೇವತಿ, ಬೇಬಿ ಬಿ, ವೆಂಕಟರಮಣ ಪಿ, ಮನ್ಮಥ ಎಂ, ಸುಮಿತ್ರ ಎ, ಶೈಲಜಾ ಎನ್, ಸುಮನ ಕೆ, ಶಿವರಾಮಾ ಬಿ, ರತ್ನಾವತಿ, ಈಶ್ವರ ಭಟ್ ಕೆ ಇವರುಗಳು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಅಮರ ಮೂಡ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಭುವನೇಶ್ವರಿ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಸೀತಾ ಎಚ್, ಹಾಗೂ ಮುಖ್ಯ ಗುರುಗಳಾದ ಶ್ರೀಮತಿ ರೂಪಾವಣಿ ಬಿ, ಹಾಗೂ ಪೋಷಕರು ಉಪಸ್ಥಿತರಿದ್ದರು.