ಸಂತ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ದೀಪಾವಳಿ ಆಚರಣೆ

0
  ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ   ಅ.30 ರಂದು ದೀಪಾವಳಿ  ಹಬ್ಬವನ್ನು ಆಚರಿಸಲಾಯಿತು. ಶಾಲಾ ಸಂಚಾಲಕರಾದ ರೆ.ಫಾ. ವಿಕ್ಟರ್ ಡಿ'ಸೋಜಾ , ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಾ , ದೀಪಾವಳಿ ಹಬ್ಬಕ್ಕೆ  ಶುಭ ಕೋರಿದರು.   ಭವಾನಿಶಂಕರ ಕೋಲ್ಚಾರ್, ಸಹ ಶಿಕ್ಷಕರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ,  ಐವರ್ನಾಡು  ಇವರು ದೀಪ ಬೆಳಗಿಸಿ, ದೀಪಾವಳಿ ಆಚರಣೆಯ ಮಹತ್ವದ ಬಗ್ಗೆ  ಮಾತನಾಡಿದರು.  ಪ್ರೌಢಶಾಲಾ,ಪ್ರಾಥಮಿಕ ಶಾಲಾ ಹಾಗೂ ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕ- ರಕ್ಷಕ  ಸಂಘದ ಉಪಾಧ್ಯಕ್ಷರುಗಳಾದ ಹೇಮನಾಥ ಬಿ ,  ಶಶಿಧರ ಎಂ ಜೆ,  ಪ್ರಭೋದ್ ಶೆಟ್ಟಿ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೆಲ್ಲಾ  ವೇದಿಕೆಯಲ್ಲಿ  ಉಪಸ್ಥಿತರಿದ್ದರು.

3ನೇ ಹಾಗೂ 4ನೇ ತರಗತಿಯ ವಿದ್ಯಾರ್ಥಿಗಳು ಸಮೂಹ ಗೀತೆಯನ್ನು ಹಾಡಿದರು.ಮಾ.ಕೃಪಾಲ್ 9ನೇ ತರಗತಿ ದೀಪಾವಳಿಯ ಕುರಿತು ಭಾಷಣ ಮಾಡಿದರು. 4ನೇ ತರಗತಿಯ ವಿದ್ಯಾರ್ಥಿಗಳು ದೀಪಾವಳಿ ಆಚರಣೆಯ ಕುರಿತು ಸಮೂಹ ನೃತ್ಯವನ್ನು ಮಾಡಿದರು.
7ನೇ ತರಗತಿಯ ವಿದ್ಯಾರ್ಥಿನಿಯರಾದ ಸಾನ್ವಿ ಬಿ ಆರ್ ಸ್ವಾಗತಿಸಿ, ಚಾರ್ವಿ ವಂದಿಸಿದರು. 9ನೇ ತರಗತಿಯ ಅನ್ವಯ್ ಹಾಗೂ ರಕ್ಷಣ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.


ಈ ಕಾರ್ಯಕ್ರಮದಲ್ಲಿ ಪೋಷಕರು ಉಪಸ್ಥಿತರಿದ್ದರು.ಹಾಗೂ ಕಾರ್ಯಕ್ರಮದ ಯಶಸ್ವಿಗೆ ಶಾಲೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಸಹಕರಿಸಿದರು.