ಐನೆಕಿದು ಗ್ರಾಮದ ಕೂಜುಗೋಡಿನವರಾಗಿದ್ದು ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ದಿ l ಕೃಷ್ಣಪ್ರಸಾದ್ ಕೂಜುಗೋಡು ಅವರ ವೈಕುಂಠ ಸಮಾರಾಧನ ಹಾಗೂ ನುಡಿನಮನ ಕಾರ್ಯಕ್ರಮ ಅ.30 ರಂದು ಮೃತರ ಕೂಜುಗೋಡು ಮನೆಯಲ್ಲಿ ನಡೆಯಿತು.
ಮೃತರ ಬಗ್ಗೆ ನಿವೃತ್ತ ಹವಾಲ್ದಾರ್ ವಾಸುದೇವ ಬಾನಡ್ಕ ಹಾಗೂ ಗದಾಧರ ಮಲ್ಲಾರ ನುಡಿನಮನ ಸಲ್ಲಿಸಿದರು.
ಸೇರಿದ್ದ ಬಂಧುಗಳು ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ದಿl ಕೃಷ್ಣ ಪ್ರಸಾದ್ ಅವರ ಪತ್ನಿ ಸವಿತಾ ಪ್ರಸಾದ್, ಮಕ್ಕಳು, ಕೂಜುಗೋಡು ಮನೆತನದವರು, ಬಂಧುಗಳು ಉಪಸ್ಥಿತರಿದ್ದರು.