ಸುಳ್ಯದ ಸಾಧಕನಿಗೆ ರಾಜ್ಯ ಪ್ರಶಸ್ತಿಯ ಗರಿ
ನಿವೃತ್ತ ಪ್ರಾಂಶುಪಾಲ, ಶಿಕ್ಷಣ ತಜ್ಞ, ಸಾಹಿತಿ ಡಾ. ಪ್ರಶಾಂತ ಮಾಡ್ತಾ ಅವರಿಗೆ ಈ ಬಾರಿಯ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ
ಘೋಷಣೆಯಾಗಿದ್ದು ಸುಳ್ಯದ ಸಾಧಕನಿಗೆ ರಾಜ್ಯ ಪ್ರಶಸ್ತಿಯ ಗರಿ ದೊರೆತಿದೆ.
ಸುಳ್ಯದಲ್ಲಿ ಹುಟ್ಟಿ ಬೆಳೆದ ಇವರು ಬೆಂಗಳೂರು ವಿ.ವಿಯಿಂದ ಸ್ವರ್ಣ ಪದಕಗಳೊಂದಿಗೆ ಕನ್ನಡ ಸಾಹಿತ್ಯದಲ್ಲಿ ಸ್ನಾನಕೊತ್ತರ ಪದವಿ ಪಡೆದ ಬಳಿಕ ಮಂಗಳೂರಿನ ಸಂತ ಅಲೋಶೀಯಸ್ ಕಾಲೇಜಿನಲ್ಲಿ ತಮ್ಮ ಪ್ರಾಧ್ಯಾಪಕ ವ್ರತ್ತಿಯ ಬಳಿಕ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಮಾಡಿದ್ದಾರೆ, ಹಾಗೂ ಶ್ರೇಷ್ಟ ಶಿಕ್ಶಣ ತಜ್ಞರಾಗಿ ಹೊರಹೊಮ್ಮಿದ್ದಾರೆ.
ಜಗದ ಹಲವು ಧರ್ಮಗಳನ್ನು,ತತ್ವಶಾಸ್ತ್ರಗಳನ್ನು ದಶಕಗಳ ಕಾಲ ಅದ್ಯಯನ ಮಾಡಿದರುವ ಪ್ರಶಾಂತ್ ಮಾಡ್ತಾ ಅವರು ಸಾಹಿತ್ಯ ವಿಮರ್ಶೆ, ಸಂಸ್ಕ್ರತಿ ವಿಮರ್ಶೆ ಹಾಗೂ ವಿವಿಧ ಸಾಹಿತ್ಯ ಪ್ರಕಾರಗಳನ್ನು ಅವುಗಳ ಮೂಲ ಗ್ರಂಥಗಳಲ್ಲಿ ಅಧ್ಯಯನ ಮಾಡಿ ಕರಗತ ಮಾಡಿಕೊಂಡಿದ್ದಾರೆ.
ಕನ್ನಡದ ಥೆಸಾರಸ್-ಪದನಿಧಿ, ಕೊಂಕಣಿ ಥೆಸಾರಸ್-ಥೆಸಾರ್’ ಕೊಂಕಣಿ ನುಡಿಗಟ್ಟುಗಳ ಬೃಹತ್ ಕೋಶವಾದ -‘ಕೊಂಕಣಿ ಪಿಕೊಳಿಂ’ ಈ ಬಗೆಯವು, ‘ನಿನ್ನಂತೆ ನಾನಗಲು’,ಮತ್ತು ‘ಸಾನಿಧ್ಯ’-ಅವರು ಕನ್ನಡಕ್ಕೆ ಅನುವಾದಿಸಿದ ಜಗದ್ಪ್ರಸಿದ್ದ ಅನುಭವಿ ಬರಹಗಳು.’ರಾಟವಳ್’,’ಶೆಂಭರ್ ಕಿಟಾಳಾಂ’ ಕೊಂಕಣಿ ಲೇಖನಗಳ ಸಂಗ್ರಹ.ಕರ್ನಾಟಕದ ಹಿರಿಯ ಶಿಕ್ಷಣ ಸಂಸ್ಥೆಯಾದ ಸಂತ ಅಲೋಶಿಯಸ್ ಕಾಲೇಜಿನ ಇತಿಹಾಸವನ್ನು ‘ಆನ್ ಈಗಲ್ಸ್ ವಿಂಗ್ಸ್’-ಎಂಬ ಗೃಂಥವನ್ನು ಆಂಗ್ಲ ಭಾಷೆಯಲ್ಲಿ ರಚಿಸಿದ್ದಾರೆ.ಸಮಾಜವನ್ನು, ಸಂಸ್ಕೃತಿಯವನ್ನು ವಿರಚನೆ ಮಾಡಿನೊಡಿ, ವಿಚಾರಕ್ಕೆ ನವಿರು ಹಾಸ್ಯ ಬೆರೆಸಿ,ಓದುಗರನ್ನು ಚಿಂತನೆಗೆ ಹಚ್ಚುವ ಅವರ ಅಂಕಣ ಬರಹ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ.
ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವೂ ಮಾಡ್ತಾ ಅವರಿಗೆ ಒಲಿದಿತ್ತು.