ಮಡಿಕೇರಿಯಿಂದ ಸುಳ್ಯ, ಪುತ್ತೂರು ಕಡೆಗೆ ಸಂಚರಿಸುವ ಬಸ್ ಗಳ ಸಂಖ್ಯೆ ಇಳಿಮುಖವಾದ ಹಿನ್ನೆಲೆಯಲ್ಲಿ ಸುಳ್ಯ ಕಡೆಗೆ ಬರುವ ಪ್ರಯಾಣಿಕರು ಮಡಿಕೇರಿ ಬಸ್ ನಿಲ್ದಾಣದಲ್ಲಿಯೇ ಉಳಿದು, ಕೆ.ಎಸ್.ಆರ್.ಟಿ.ಸಿ.ಗೆ ಹಿಡಿಶಾಪ ಹಾಕಿದ ಘಟನೆ ನ. 1ರಂದು ನಡೆದಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ದೂರದ ಊರಿಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದ್ದರೂ, ಬಸ್ ಗಳ ಸಂಖ್ಯೆ ಕಡಿಮೆ ಇತ್ತು. ಇದರಿಂದಾಗಿ ಪ್ರಯಾಣಿಕರು ಬಸ್ ನಿಲ್ದಾಣದಲ್ಲೇ ಉಳಿಯುವಂತಾಗಿದೆ. ಅಪರೂಪಕ್ಕೆ ಒಂದೋಂದು ಬಸ್ ಬಿಟ್ಟರೂ, ಪ್ರಯಾಣಿಕರ ನೂಕು ನುಗ್ಗಲಿನಿಂದಾಗಿ ಹಿರಿಯ ಪ್ರಯಾಣಿಕರು ಬಸ್ ಹತ್ತಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುವಾಗ ಸಾರಿಗೆ ಸಂಸ್ಥೆ ಇದ್ದ ಬಸ್ ಗಳನ್ನು ಕಡಿತಗೊಳಿಸಿರುವುದರಿಂದ ಈ ಸಮಸ್ಯೆ ಎದುರಾಗಿರುವುದಾಗಿ ಪ್ರಯಾಣಿಕರಾದ ಪಂಜದ ಲಕ್ಷ್ಮಣರವರು ಸುದ್ದಿಗೆ ತಿಳಿಸಿದ್ದಾರೆ.