ಹರಿಹರಪಲ್ಲತ್ತಡ್ಕ ಗ್ರಾಮದಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾನದ ಅಧಿಕೃತ ಜಾಲತಾಣ www.shriharihareshwara.org ಇದರ ಅನಾವರಣ ಕಾರ್ಯಕ್ರಮ ನ.1ರಂದು ದೀಪಾವಳಿಯ ಶುಭದಿನದಂದು ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಈ ಜಾಲತಾಣದ ಮೂಲಕ ದೇವಸ್ಥಾನದ ಮಾಹಿತಿ, ಆನ್‌ಲೈನ್ ಸೇವಾ ಬುಕ್ಕಿಂಗ್, ದೇಣಿಗೆ ಸೇವೆಗಳನ್ನು ಕಲ್ಪಿಸಲಾಗುತ್ತದೆ. ಜಾಲತಾಣವನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೂಜುಗೋಡು ಜಾಲತಾಣವನ್ನು ಅನಾವರಣಗೊಳಿಸಿ ಮಾತನಾಡುತ್ತಾ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹತ್ತಿರದಲ್ಲಿರುವ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಈಗಾಗಲೇ ಸುಬ್ರಹ್ಮಣ್ಯಕ್ಕೆ ಬರುವ ಭಕ್ತಾದಿಗಳು ಬರುತ್ತಿದ್ದು, ದೇವಸ್ಥಾನದಲ್ಲಿ ಸೇವೆ ಸಲ್ಲಿಸಿ ಪುನೀತರಾಗುವುದಲ್ಲದೆ,ಸುತ್ತಮುತ್ತಲಿನ ಪರಿಸರದ ಸೌಂದರ್ಯವನ್ನು ಆಸ್ವಾದಿಸಿ ಹೋಗುತ್ತಿದ್ದಾರೆ. ಈ ಜಾಲತಾಣದ ಮೂಲಕ ದೇವಸ್ಥಾನದ ಮಾಹಿತಿ, ಕ್ಷೇತ್ರದ ಮಹಿಮೆ ವಿಶ್ವದಾದ್ಯಂತ ಪಸರಿಸಲಿದ್ದು, ನಮ್ಮ ಗ್ರಾಮದವರೇ ಆದ ನಿವೃತ್ತ ಮೆಸ್ಕಾಂ ಎಂಜಿನಿಯರ್ ಮಂಜುನಾಥಯ್ಯರವರ ಮಗ ಶ್ರೀಕರವರ ನೇತೃತ್ವದಲ್ಲಿ ಜಾಲತಾಣ ವಿನ್ಯಾಸಗೊಂಡಿರುವುದು ಬಹಳ ಸಂತೋಷದ ವಿಷಯ ಎಂದರು. ಇದೇ ಸಂದರ್ಭದಲ್ಲಿ ಜಾಲತಾಣದ ವಿನ್ಯಾಸ, ನಿರ್ವಹಣೆ ಮಾಡುತ್ತಿರುವ ಐಸ್ ಕೋಡರ್ಸ್ ತಂಡದ ಮುಖ್ಯಸ್ಥರಾದ ಮಾ. ಶ್ರೀಕರ ಜಾಲತಾಣದ ಮಾಹಿತಿಯನ್ನು ನೀಡಿದರು. ಜಾಲತಾಣ ಅನಾವರಣಗೊಳಿಸುವ ಮೊದಲು ದೇವಸ್ಥಾನದ ಅರ್ಚಕರಾದ ಸುಬ್ರಹ್ಮಣ್ಯ ನರಸಿಂಹ ಭಟ್ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಸದಸ್ಯರು, ಅರ್ಚಕ ವೃಂದದವರು, ಕಚೇರಿಯ ಸಿಬ್ಬಂದಿ ವರ್ಗದವರು, ವಿವಿಧ ಸಮಿತಿಗಳ ಪದಾಧಿಕಾರಿಗಳು, ಐಸ್ ಕೋಡರ್ಸ್ ತಂಡದ ಸದಸ್ಯರಾದ ಮಾ. ಸ್ಕಂದ ಗಣೇಶ ಪಾಲೆಚ್ಚಾರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Home Uncategorized ಹರಿಹರಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ದೇವರ ಸನ್ನಿಧಿಯಲ್ಲಿ ದೇವಸ್ಥಾನದ ಅಧಿಕೃತ ಜಾಲತಾಣ ಅನಾವರಣ