400ಕ್ಕೂ ಹೆಚ್ಚು ಸ್ಪರ್ಧಾಳುಗಳಿಂದ 117 ಕ್ಕೂ ಹೆಚ್ಚು ಸ್ಪರ್ಧೆ
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ ನವಂಬರ್ 3ರಂದು ಗೂನಡ್ಕದ ಸಜ್ಜನ ಪ್ರತಿಷ್ಠಾನ ಸಬಾಭವನದಲ್ಲಿ ನಡೆಯಿತು.
ಸುಳ್ಯ ಡಿವಿಷನ್ ನ ನಾಲ್ಕು ಸೆಕ್ಟರ್ ಗಳ ಸಾಹಿತ್ಯೋತ್ಸವಗಳಲ್ಲಿ ಪ್ರಥಮ ಸ್ಥಾನಿಗಳಾದ ಸುಮಾರು 400 ಕ್ಕೂ ಹೆಚ್ಚು ಸ್ಪರ್ಧಾಳುಗಳು ಡಿವಿಷನ್ ಮಟ್ಟದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಬೆಳಗ್ಗೆ ಸ್ವಾಗತ ಸಮಿತಿ ಚೇರ್ಮೆನ್ ಲತೀಫ್ ಸಖಾಫಿ ಗೂನಡ್ಕ ರವರ ನೇತೃತ್ವ ದಲ್ಲಿ ಝಿಯಾರತ್ ಪ್ರಾರ್ಥನೆ ನಡೆದು ಗೂನಡ್ಕ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಗೂನಡ್ಕ ಧ್ವಜಾರೋಹಣ ನೆರವೇರಿಸಿದರು.
ಸಯ್ಯಿದ್ ಕುಂಞಿ ಕೋಯ ತಂಙಳ್ ಸಹದಿ ಸುಳ್ಯ ದುವಾ ನೇತ್ರತ್ವ ವಹಿಸಿದ್ದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಫೈಝಲ್ ಝುಹರಿ ವಹಿಸಿ ಸ್ಥಳೀಯ ಮಸೀದಿ ಖತಿಬರಾದ ಅಬೂಬಕ್ಕರ್ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು.
ವೇದಿಕೆಯಲ್ಲಿ ಇಂದು ಸನ್ಮಾನ ಗೊಳ್ಳಲಿರುವ ಸಜ್ಜನ ಪ್ರತಿಷ್ಠಾಪನ ಅಧ್ಯಕ್ಷ ಡಾ. ಉಮ್ಮರ್ ಬೀಜದ ಕಟ್ಟೆ,ಸಂಘಟನೆಯ ಮುಖಂಡರುಗಳಾದ ಹಮೀದ್ ಬೀಜ ಕೊಚ್ಚಿ, ಹಮೀದ್ ಸುಣ್ಣ ಮೂಲೆ, ಸಿದ್ದಿಕ್ ಕಟ್ಟೆಕ್ಕಾರ್ಸ್, ಸಿದ್ದಿಕ್ ಗೂನಡ್ಕ, ಮಜೀದ್ ನಡುವಡ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸಂಜೆ 7 ಗಂಟೆಗೆ ಸಮಾರೋಪ ಸಂಗಮ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ, ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ,ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.
ಸುಳ್ಯ ಡಿವಿಷನ್ ಎಸ್ಸೆಸ್ಸೆಫ್ ಅಧ್ಯಕ್ಷ ಸಿದ್ದೀಖ್ ಹಿಮಮಿ ಸಖಾಫಿ ಮತ್ತು ಪದಾಧಿಕಾರಿಗಳು ಸದಸ್ಯರು ಸಹಕರಿಸಿದರು.