ಕುಂಬರ್ಚೋಡು ಮೋಹಿಯದ್ದಿನ್ ಜುಮಾ ಮಸೀದಿ ವತಿಯಿಂದ ಮಾದಕ ವ್ಯಸನ ಬಗ್ಗೆ ಜನ ಜಾಗೃತಿ ಅಭಿಯಾನ

0

ಕುಂಬರ್ಚೋಡು ಜುಮಾ ಮಸೀದಿ ಆಡಳಿತ ಸಮಿತಿ ವತಿಯಿಂದ ಮಾದಕ ವ್ಯಸನ ಕುರಿತು ಜನ ಜಾಗೃತಿ ಕಾರ್ಯಕ್ರಮ ನ.3 ರಂದು ನಡೆಯಿತು.

ಕಾರ್ಯಕ್ರಮದ ಕುರಿತು ಮಾತನಾಡಿದ ಸಂಘಟಕರು ‘ಇತ್ತೀಚೆಗೆ ಮಾದಕ ವಸ್ತು ಹಾಗು ಅಮಲು ಪದಾರ್ಥಗಳ ಸೇವನೆ ಮತ್ತು ಮಾರಾಟ ಇತ್ಯಾದಿ ಚಟುವಟಿಕೆಗಳು ಹೆಚ್ಚುತ್ತಿದ್ದು ಇದರಿಂದ ಯುವ ಜನತೆಗೆ ಜಾಗೃತಿ ಮೂಡಿಸುವ ಸಲುವಾಗಿ ಮಾಹಿತಿ ಕಾರ್ಯಗಾರವನ್ನು ನಮ್ಮ ಮದರಸದಲ್ಲಿ ನಡೆಸಲಾಗಿದೆ ಎಂದರು.

ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ನೂರುಲ್ ಹುದಾ ಮಾಡನ್ನೂರು ಕಾಲೇಜು ಉಪನ್ಯಾಸಕರಾದ ಸಿದ್ದಿಕ್ ಹುದವಿ ರವರು ‘ಮಾದಕ ವಸ್ತುವನ್ನು ವಿತರಿಸಿ ಸಮಾಜದ ದಾರಿ ತಪ್ಪಿಸಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನಿಸುತ್ತಿವೆ. ಅವುಗಳನ್ನು ಮಟ್ಟ ಹಾಕಲು ವಿದ್ಯಾರ್ಥಿಗಳು ಯುವ ಸಮುದಾಯ ಧೈರ್ಯ ದಿಂದ ಹೆಜ್ಜೆ ಇಡಬೇಕಾದ ಅಗತ್ಯವಿದೆ ಎಂದರು.

ಮಸೀದಿಯ ಅಧ್ಯಕ್ಷರಾದ ಹನೀಫ್ ಹಾಜಿ ಕೆ ಎಂ ರವರು ಮಾತನಾಡಿ ಯುವಜನತೆ ಮಾದಕ ವಸ್ತುಗಳ ಚಟಕ್ಕೆ ಆಂಟಿಕೊಳ್ಳದೆ ಅಂತ ಕೆಟ್ಟ ಆಲೋಚನೆಗಳಿಂದ ಮುಕ್ತಿ ಹೊಂದಿ ಸುಖ ಜೀವನ ಕಟ್ಟಿಕೊಳ್ಳಬೇಕು ಎಂದರು.ವೇದಿಕೆಯಲ್ಲಿ ಖತಿಬ್ ಅಶ್ರಫ್ ಉಸ್ತಾದ್ ಅಬ್ದುಲ್ ಕರೀಂ ಮತ್ತಿತರರು ಉಪಸ್ಥಿತರಿದ್ದರು.

ಅಭಿಯಾನದಲ್ಲಿ ಸ್ಥಳೀಯ ನಿವಾಸಿಗಳು, ಯುವಕರು ಭಾಗವಹಿಸಿದ್ದರು.

ಮಸೀದಿಯ ಕಾರ್ಯದರ್ಶಿ ಅಬ್ದುಲ್ ಖಾದರ್ ಅಕ್ಕರೆ ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.