ನ. 4 ಮತ್ತು 5ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಎಲಿಮಲೆಯ ವಿದ್ಯಾರ್ಥಿನಿ ಯಕ್ಷಿತಾ ಡಿ. ಜಾವೆಲಿನ್ ತ್ರೋ ದಲ್ಲಿ ಪ್ರಥಮ ಹಾಗೂ ಶಾಟ್ ಫುಟ್ ನಲ್ಲಿ ತೃತೀಯ ಸ್ಥಾನದೊಂದಿಗೆ ಕೋಲಾರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾಳೆ.
ವಿಜೇತ ಕ್ರೀಡಾಪಟು ಯಕ್ಷಿತಾ ಡಿ ಹಾಗೂ ಜಿಲ್ಲಾ ಮಟ್ಟ ಕ್ರೀಡಾಕೂಟದಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಗಳಾದ ಲಿಖಿತ್ ಜಿ, ತನ್ವಿ, ವರ್ಷಿಣಿ ,ಆಶಿಕ ಮತ್ತು ಶ್ರೀ ಲಕ್ಷ್ಮಿ ಇವರನ್ನು ಸ್ವಾಗತಿಸಿ ಎಲಿಮಲೆ ಪೇಟೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಶಾಲೆಗೆ ಕರೆ ತರಲಾಯಿತು. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ತಿರುಮಲೇಶ್ವರಿ ಯು.ಎಸ್. ಹಾಗೂ ಕ್ರೀಡಾ ತರಬೇತುದಾರಾದ ಮಾಯಿಲಪ್ಪ ಕೊಂಬೆಟ್ಟು ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ದೇವಚಳ್ಳ ಗ್ರಾಮ್ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಶ್ರೀಧರ್ ಗೌಡ ಕೆರೆಮೂಲೆ, ಜ್ಞಾನ ದೀಪ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ಗಧಾದರ ಬಾಳುಗೋಡು ಹಾಗೂ ಸರಕಾರಿ ಪ್ರೌಢಶಾಲೆ ಎಲಿಮಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಕೆ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಅಂಬೆಕಲ್ಲು ಶುಭ ಹಾರೈಸಿದರು.
ಮೆರವಣಿಗೆಯಲ್ಲಿ ಉಭಯ ಶಾಲೆಗಳ ಎಸ್ ಡಿ ಎಂ ಸಿ ಅಧ್ಯಕ್ಷರುಗಳಾದ ಧನಂಜಯ ಬಾಳೆತೋಟ ಮತ್ತು ಜಯಾನಂದ ಪಟ್ಟೆ, ಸದಸ್ಯರುಗಳಾದ ಕೃಷ್ಣಪ್ಪ ಹರ್ಲಡ್ಕ, ಪುರುಷೋತ್ತಮ ಸುಳ್ಳಿ, ರಾಜೇಶ್ ಗುಡ್ಡೆ, ಸವಿತಾ ಚಾಕೋಟೆಮೂಲೆ, ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಕಿರಣ್ ಗುಡ್ಡೆಮನೆ, ಪ್ರಧಾನ ಕಾರ್ಯದರ್ಶಿ ಮುರಳೀಧರ ಪುನ್ಕುಟ್ಟಿ, ಸ್ಕೌಟ್ಸ್ ಮಾಸ್ಟರ್ ಭರತ್ ನಾಯಕ್, ಹಿರಿಯ ವಿದ್ಯಾರ್ಥಿಗಳಾದ ಪ್ರಸನ್ನ ಎಸ್ ಎನ್, ಹ್ಯಾರಿಸ್ ಪಳ್ಳಿಕಲ್ಲ್, ಓಂ ಪ್ರಸಾದ್ ಕಜೆ, ಕುಸುಮಾಧರ ಅಂಬೆಕಲ್ಲು, ಜೀವನ್ ತಳೂರು, ಬಾಲಚಂದ್ರ ಅಂಬೆಕಲ್ಲು, ಸೂಫಿ ಎಲಿಮಲೆ, ಸ ಪ್ರೌ ಶಾ ಎಲಿಮಲೆ ಹಾಗೂ ಹಿ ಪ್ರಾ ಶಾ ದೇವಚಳ್ಳದ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕ್ರೀಡಾಕೂಟದ ವಿಜೇತ ವಿದ್ಯಾರ್ಥಿನಿ ಯಕ್ಷಿತಾ ಡಿ ಇವಳಿಗೆ ದೇವಚಳ್ಳ ಗ್ರಾಮ ಪಂಚಾಯತ್ ವತಿಯಿಂದ 5000 ರೂ. ಪ್ರೋತ್ಸಾಹ ಧನವನ್ನು ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಸದಸ್ಯ ದುರ್ಗಾದಾಸ್ ಮೆತ್ತಡ್ಕ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಹಸ್ತಾಂತರಿಸಿದರು.