ನ.15-16: ಪೈಲಾರಿನಲ್ಲಿ 11 ನೇ ವರ್ಷದ ಯಕ್ಷೋತ್ಸವ- 2024

0

ಪೈಲಾರು ಫ್ರೆಂಡ್ಸ್ ಕ್ಲಬ್ ಮತ್ತು ಶೌರ್ಯ ಯುವತಿ ಮಂಡಲದ ಸಹಯೋಗದಲ್ಲಿ 11ನೇ ವರ್ಷದ ಪೈಲಾರು ಯಕ್ಷೋತ್ಸವ 2024ರ ಯಕ್ಷಗಾನ ಪ್ರದರ್ಶನ ಮತ್ತು ಸನ್ಮಾನ ಸಮಾರಂಭವು ನ. 15 ಮತ್ತು 16 ರಂದು ಪೈಲಾರು ವಠಾರದಲ್ಲಿ ನಡೆಯಲಿರುವುದು.

ನ. 15 ರಂದು ಸಂಜೆ ಗಂಟೆ 5 ರಿಂದ ಉದ್ಘಾಟನಾ ಸಮಾರಂಭವು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸದಾನಂದ ಮಾವಜಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವುದು.
ಹಿರಿಯ ಪ್ರಗತಿಪರ ಕೃಷಿಕರು ಕಲಾ ಪೋಷಕರು ಆನೆಕಾರ ಗಣಪಯ್ಯ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಮರ ಮುಡ್ನೂರು ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಕೋಡ್ತುಗುಳಿ, ಚೊಕ್ಕಾಡಿ ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಜೆ, ಪೈಲಾರು ಸ.ಹಿ. ಪ್ರಾ. ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷ ಶ್ರೀಮತಿ ದೇವಕಿ ಪೈಲಾರು, ಮುಖ್ಯ ಶಿಕ್ಷಕಿ ಶ್ರೀಮತಿ ಚಂದ್ರಾವತಿ ಹೆಚ್ಉಪಸ್ಥಿತರಿರುತ್ತಾರೆ. ಸಂಜೆ ಗಂಟೆ 6 ರಿಂದ ಕರ್ನಾಟಕ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಶರ ಸೇತು ಬಂಧನ ಎಂಬ ಅರೆಭಾಷೆಯ ತಾಳಮದ್ದಲೆಯು ನಡೆಯಲಿರುವುದು.
ನ. 16ರಂದು ಸಂಜೆ ಗಂಟೆ 6 ರಿಂದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಎಂಬ ಯಕ್ಷಗಾನ ಬಯಲಾಟವು ಪ್ರದರ್ಶನವಾಗಲಿರುವುದು.


ರಾತ್ರಿ ಗಂಟೆ 8 ರಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ರವರ ಅಧ್ಯಕ್ಷತೆಯಲ್ಲಿ ಸನ್ಮಾನ ಸಮಾರಂಭವು ನಡೆಯಲಿರುವುದು. ಹಿರಿಯ ಯಕ್ಷಗಾನ ಕಲಾವಿದ ಸುಬ್ರಾಯ ಸಂಪಾಜೆಯವರಿಗೆ 2024ರ ಯಕ್ಷೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ನಿವೃತ್ತ ಉಪ ನಿರ್ದೇಶಕಿ ಪದವಿಪೂರ್ವ ಶಿಕ್ಷಕಿ ಇಲಾಖೆಯ ಶ್ರೀಮತಿ ಶೀಲಾವತಿ ಕೊಳಂಬೆ ಯವರುಸನ್ಮಾನಿಸಲಿದ್ದಾರೆ. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅಭಿನಂದನಾ ಭಾಷಣ ಮಾಡಲಿದ್ದಾರೆ. ಆಗಮಿಸಿದ ಕಲಾಭಿಮಾನಿಗಳಿಗೆ ರಾತ್ರಿ ಭೋಜನದ ವ್ಯವಸ್ಥೆ ಮಾಡಲಾಗುವುದೆಂದು ಸಂಘದ ಅಧ್ಯಕ್ಷ ಜೈದೀಪ್ ಕಡಪಳ ತಿಳಿಸಿದ್ದಾರೆ.