ದಲಿತರ ಭೂಮಿ ಅತಿಕ್ರಮಣ ಮಾಡಿದವರನ್ನು ಎಬ್ಬಿಸಿ‌ ಮೂಲ ವಾರಸುದಾರರಿಗೆ ಕೊಡಿಸಿ : ತಹಶೀಲ್ದಾರ್ ರಿಗೆ ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಅಹವಾಲು ಸಲ್ಲಿಕೆ

0

20 ದಿನದಲ್ಲಿ ನ್ಯಾಯ ಸಿಗದಿದ್ದರೆ ಪ್ರತಿಭಟನೆ

ಪಂಜದ ಕರಿಕ್ಕಳದಲ್ಲಿ ದಲಿತರ ಭೂಮಿಯನ್ನು ಅತಿಕ್ರಮಣ ಮಾಡಿ ನೆಲೆಸಿದವರನ್ನು ಎಬ್ಬಿಸಿ, ಮೂಲ ವಾರಸುದಾರರಿಗೆ ನೆಲೆಸಲು ಅವಕಾಶ ಕಲ್ಪಿಸಬೇಕೆಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ್ ನೇತೃತ್ವದಲ್ಲಿ ತಹಶೀಲ್ದಾರ್ ರನ್ನು ಒತ್ತಾಯಿಸಿದ ಹಾಗೂ 20 ದಿನದಲ್ಲಿ ನಮ್ಮ ಬೇಡಿಕೆ ನ್ಯಾಯ ಸಿಗದಿದ್ದರೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿ ಹೋದ ಘಟನೆ ನ.12ರಂದು ವರದಿಯಾಗಿದೆ.

ಬೆಳಗ್ಗೆ ಸುಳ್ಯ ತಾಲೂಕು ಕಚೇರಿಗೆ ಬಂದು ತಹಶೀಲ್ದಾರ್ ಮಂಜುಳಾರನ್ನು ಭೇಟಿಯಾದ ಗಿರಿಧರ ನಾಯ್ಕ್, ಲಕ್ಷ್ಮೀ ಸುಬ್ರಹ್ಮಣ್ಯ ನೇತೃತ್ವದ ತಂಡದವರು ತಹಶೀಲ್ದಾರ್ ರಿಗೆ ಅಹವಾಲು ಸಲ್ಲಿಸಿದರು.

ಪಂಜದ ಕರಿಕ್ಕಳದಲ್ಲಿ ಮೋನಪ್ಪ ಗೌಡ ಎಂಬವರು ಇದರು ಜಾಗ ಹಿಂದೆ ಚರುಂಬ ಎಂಬವರದ್ದಾಗಿತ್ತು. ಮೂಲ ವಾರಸುದಾರರಾದ ಚರುಂಬರವರನ್ನು ಎಬ್ಬಿಸಿ ಅಲ್ಲಿ ಮೋನಪ್ಪ ಗೌಡರು ವಾಸ್ತವ್ಯವಿದ್ದು, ಇದೀಗ ಮೂಲ ವಾರಸುದಾರರಿಗೆ ಆ ಜಾಗವನ್ನು ಕೊಡಿಸಬೇಕು. ಈ ಕುರಿತು ನಾವು ಹಲವು ಬಾರಿ, ದಾಖಲೆ‌ ಸಹಿತ ದೂರಿಕೊಂಡರೂ ಏನೂ ಪ್ರಯೋಜನ ಆಗಿಲ್ಲ. ಈಗ ಚರುಂಬ ಅವರ ಮನೆಯವರಿಗೆ ಮನೆಯಿಲ್ಲದೆ ಸುಬ್ರಹ್ಮಣ್ಯ ದ ದೇವರಗದ್ದೆಯಲ್ಲಿ ಜೋಪಡಿಯಲ್ಲಿ ವಾಸವಿದ್ದಾರೆ. ಆದ್ದರಿಂದ ಅವರ ಜಾಗವನ್ನು ಅವರಿಗೆ ಕೊಡಿಸಬೇಕೆಂದು ಒತ್ತಾಯಿಸಿದರು.

ಅಹವಾಲು ಆಲಿಸಿದ ತಹಶೀಲ್ದಾರ್ ‌ಮಂಜುಳಾರವರು ಈ ಕುರಿತು ನಾವು ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದರು. ಹಲವು ವರ್ಷದಿಂದ ನಾವು ಬೇಡಿಕೆ ಇಡುತಿದ್ದೇವೆ ಎಷ್ಟೆಂದು ನಾವು ಕಾಯುವುದು ಎಂದು ಹೇಳಿದರು. “ಪರಿಶೀಲನೆ ನಡೆಸದೇ ಏನೂ ಹೇಳಲು ಸಾಧ್ಯವಿಲ್ಲ” ಎಂದು ತಹಶೀಲ್ದಾರ್ ಮತ್ತೆ ಹೇಳಿದಾಗ, 20 ದಿನಗಳೊಳಗೆ ನಮಗೆ ನ್ಯಾಯ ಸಿಗಬೇಕು. ಇಲ್ಲವಾದರೆ ಮತ್ತೆ ಇಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿ ಅಲ್ಲಿಂದ ಹೋದರು.

ಸಮಿತಿಯ ಕಾರ್ಯದರ್ಶಿ ಪ್ರಮೋದ್, ಚರುಂಬ ಅವರ ಮಕ್ಕಳಾದ ಮೋಹಿನಿ, ಅಕ್ಕು, ತಿಮ್ಮಕ್ಕ, ಸೊಸೆ ಗಿರಿಜಾ, ಮೊಮ್ಮಕ್ಕಳಾದ ಸದಾನಂದ, ಚಂದ್ರಶೇಖರ ಮೊದಲಾದವರಿದ್ದರು.