⬆️ ಐವತ್ತೊಕ್ಲು ಮತ್ತು ಕೂತ್ಕುಂಜ ಗ್ರಾಮದಲ್ಲಿ ಒಟ್ಟು 364 ಲಸಿಕೆ
⬆️ 7 ತಂಡವಾಗಿ ನಡೆದ ಕಾರ್ಯಕ್ರಮ
ಕರ್ನಾಟಕ ಸರಕಾರ , ದ.ಕ ಜಿಲ್ಲಾ ಪಂಚಾಯತ್ ಮಂಗಳೂರು,ಪಶುಪಾಲನ & ಪಶು ವೈದ್ಯಕೀಯ ಸೇವಾ ಇಲಾಖೆ ದ.ಕ,ದಕ್ಷಿಣ ಕನ್ನಡ ಸರಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು,
ಗ್ರಾಮ ಪಂಚಾಯತ್ ಪಂಜ & ಪಂಜ ಹಾಲು ಉತ್ಪಾದಕರ ಸಹಕಾರಿ ಸಂಘ ನಿ.
ಇದರ ಸಹಯೋಗದೊಂದಿಗೆ
ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 6 ನೇ ಸುತ್ತಿನ ಉಚಿತ ಕಾಲು ಬಾಯಿ ರೋಗ ಲಸಿಕಾ ಅಭಿಯಾನ
ನ. 12 ರಂದು ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜರುಗಿತು .
ಏಳು ತಂಡವಾಗಿ ಒಂಬತ್ತು ಲಸಿಕೆದಾರರು ಏಕಕಾಲದಲ್ಲಿ ಐವತೊಕ್ಲು ಮತ್ತು ಕೂತ್ಕುಂಜ ಗ್ರಾಮದಲ್ಲಿ ತೆರಳಿ ನಡೆದಿದ್ದು ಒಟ್ಟು 364 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.
ಮುಂಜಾನೆ ಪಂಜ ಗ್ರಾಮ ಪಂಚಾಯತ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಾರಾಯಣ ಕೃಷ್ಣನಗರ, ಪಶು ವೈದ್ಯಾಧಿಕಾರಿ ಡಾ.ಸೂರ್ಯ ನಾರಾಯಣ ಭಟ್, ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ನಾಯಕ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು, , ಗ್ರಾಮ ಪಂಚಾಯತ್ ಸದಸ್ಯರು , ಪಶು ಸಖಿಯರು ಮೊದಲಾದವರು ಉಪಸ್ಥಿತರಿದ್ದರು.
ಅಭಿಯಾನದ ಕಾರ್ಯಕರ್ತರು : ಪಶು ವೈದ್ಯಾಧಿಕಾರಿ ಡಾ.ಸೂರ್ಯ ನಾರಾಯಣ ಭಟ್ ರವರ ನೇತೃತ್ವದಲ್ಲಿ ಜಾ.ಕೃ.ಗ.ಕಾರ್ಯಕರ್ತ ಕೇಶವ ಭಟ್ ಚೀಮುಳ್ಳು, ಪಶು ಸಂಜೀವಿನಿ ಘಟಕದ ಪ್ಯರ ವೇಟ್ ಶ್ರೀವತ್ಸ ಪಿ ಬಿ, ಪಶು ಸಖಿಯರಾದ ಪ್ರತಿಮಾ ಬೆಳ್ಳಾರೆ, ರಾಜೇಶ್ವರಿ ಐವರ್ನಾಡು, ಗೀತಾ ಕೊಡಿಯಾಲ, ಪದ್ಮಾವತಿ ಕಲ್ಮಡ್ಕ, ಮೀನಾಕ್ಷಿ ಪಂಜ, ಪಶು ಇಲಾಖೆಯ ನೌಕರರಾದ ನಾರಾಯಣ ,ಯಶೋಧ, ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಚಿದ್ಗಲ್ಲು, ನಿರ್ದೇಶಕ ಉದಯ ಬಿಡಾರಕಟ್ಟೆ, ಸಿಬ್ಬಂದಿ ಪದ್ಮಯ್ಯ ಕೆಮ್ಮೂರು, ಸದಸ್ಯ ದುರ್ಗಾಪ್ರಸಾದ್ ಬಸ್ತಿಕಾಡು, ಚೈತ್ರಪ್ರಸಾದ್ ಅಳ್ಪೆ ಬನ ಪಾಲ್ಗೊಂಡಿದ್ದರು.