ನಡುಗಲ್ಲು ಸ. ಹಿ. ಪ್ರಾ. ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಅಪರಾಹ್ನ ಸಭಾ ಕಾರ್ಯಕ್ರಮ ಏರ್ಪಡಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಹೊಂಬೆಳಕು ಬಳಗ (ರಿ) ನಾಲ್ಕೂರು ವತಿಯಿಂದ ‘ಸ್ವಚ್ಛ ಪರಿಸರ ‘ ವಿಷಯವಾಗಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಚಿತ್ರ ಬರೆಯುವ ಸ್ಪರ್ಧೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ’ ಪ್ರಬಂಧ ಸ್ಪರ್ಧೆ ‘ ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಗಳಲ್ಲಿ ತರಗತಿ ವಾರು ಪ್ರಥಮ, ದ್ವಿತೀಯ, ತೃತೀಯ ಬಂದವರಿಗೆ, ₹100,75,50 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರದ ಕೊಡುಗೆಯನ್ನು ಹೊಂಬೆಳಕು ತಂಡದ ಸದಸ್ಯರು ನೀಡಿದರು. ಶಾಲಾ ವತಿಯಿಂದ 1ರಿಂದ 7ನೇ ತರಗತಿ ವರೆಗೆ ನಿಂಬೆ ಚಮಚ ಓಟ, ಲಕ್ಕಿ ಗೇಮ್, ಗ್ಲಾಸಿಗೆ ನೀರು ತುಂಬಿಸುವುದು ಸ್ಪರ್ಧೆಗಳನ್ನು ಏರ್ಪಡಿಸಿ ತರಗತಿವಾರು ಪ್ರಥಮ, ದ್ವಿತೀಯ, ತೃತೀಯ ಬಂದವರಿಗೆ ಪುಸ್ತಕವನ್ನು ಬಹುಮಾನ ರೂಪವಾಗಿ ನೀಡಲಾಯಿತು.

ಸಭಾಧ್ಯಕ್ಷತೆಯನ್ನು ಶಾಲಾ ‘ಎಸ್ ಡಿ ಎಂ ಸಿ ‘ ಅಧ್ಯಕ್ಷರಾದ ಶಿವರಾಮ ಉತ್ರoಬೆ ವಹಿಸಿ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಪ್ರಾರ್ಥನಾ ಗೀತೆ , ಭಾಷಣ ನಡೆಯಿತು. ಶಾಲಾ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಪಾರಿಪ್ಪಾಡಿ ಸ್ವಾಗತಿಸಿ, ದಿನದ ವಿಶೇಷತೆ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಹೊಂಬೆಳಕು ತಂಡದ ಗೌರವಾಧ್ಯಕ್ಷರಾದ ಉದಯಕುಮಾರ್ ದೇರಪಜ್ಜನಮನೆ ಮಾತನಾಡಿ ಪ್ರಾರಂಭದಲ್ಲಿ ಶಾಲೆ ಬೆಳೆದು ಬಂದ ದಾರಿ , ತಮ್ಮ ಮನೆತನದವರು ನೀಡಿದ ಕೊಡುಗೆ ಬಗ್ಗೆ ಸ್ಮರಿಸಿದರು. ವೇದಿಕೆಯಲ್ಲಿ ‘ಎಸ್ ಡಿ ಎಮ್ ಸಿ’ ಸದಸ್ಯರಾದ ಯುವರಾಜ ತಂಟೆಪ್ಪಾಡಿ, ಶ್ರೀಮತಿ ವನಿತಾ ಬಾಲಕೃಷ್ಣ ಅಲ್ಲದೆ ಹೊಂಬೆಳಕು ತಂಡದ ಸದಸ್ಯರಾದ ದಿನೇಶ್ ಹಾಲೆಮಜಲು, ನಿತಿನ್ ದೇರಪ್ಪಜ್ಜನಮನೆ ಉಪಸ್ಥಿತರಿದ್ದರು.

ಶಿಕ್ಷಕರಾದ ಮಹೇಶ್ ಕೆಕೆ ಇವರು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾ ಹರ ಲಾಲ್ ನೆಹರುರವರ ಜೀವನ ಚರಿತ್ರೆ, ಅವರು ನಡೆದು ಬಂದ ದಾರಿ, ಶಿಕ್ಷಣ, ಸ್ವಾತಂತ್ರ ಹೋರಾಟದಲ್ಲಿ ಅವರ ಪಾತ್ರ , ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.

ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ವನಜಾಕ್ಷಿ ಎಂ. ಇವರು ಕಾರ್ಯಕ್ರಮ ನಿರ್ವಹಿಸಿ ದಿನದ ಮಹತ್ವದ ಬಗ್ಗೆ ಹಾಡನ್ನು ಹಾಡಿ ಮನರಂಜಿಸಿದರು. ಅತಿಥಿ ಶಿಕ್ಷಕಿ ಶ್ರೀಮತಿ ಸುಮನ ಹೊಂಬೆಳಕು ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಜ್ಞಾನದೀಪ ಶಿಕ್ಷಕಿ ಶ್ರೀಮತಿ ಸವಿತಾ ಇವರು ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿಯನ್ನು ಓದಿದರು. ಪ್ರ ಶಿಕ್ಷಣಾರ್ಥಿ ಶ್ರೀಮತಿ ಮೋಕ್ಷ ಇವರು ವಂದನೆಗಳನ್ನು ಸಲ್ಲಿಸಿದರು. ಮಹೇಶ್ ಕೆ.ಕೆ.ತಮ್ಮ ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಸಿಹಿ ಹಂಚಿ ಸಂಭ್ರಮಿಸಿದರು.