ಸುಳ್ಯ ನ್ಯಾಯಾಲಯದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ

0

ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ
ಉಚಿತ ವೈದ್ಯಕೀಯ ತಪಾಷಣಾ ಶಿಬಿರ ನ. 12 ರಂದು ಸುಳ್ಯ ವಕೀಲರ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಹಾಗೂ ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಬಿ ಮೋಹನ್ ಬಾಬು ನೆರವೇರಸಿದರು.

ವೇದಿಕೆಯಲ್ಲಿ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳಾದ ಕು. ಅರ್ಪಿತಾ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೊಡ್ತುಗುಳಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಸುಳ್ಯ ಅರೋಗ್ಯ ಕೇಂದ್ರದ ಅಧಿಕಾರಿ ಡಾ. ಕರುಣಾಕರ,
ಸುಳ್ಯ ಸಹಾಯಕ ಸರಕಾರಿ ಅಭಿಯೋಜಕ ರಮೇಶ ಆರ್,ಪ್ಯಾನಲ್ ವಕೀಲರಾದ ನಾರಾಯಣ ಎಂ ಮೊದಲಾದವರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಸುಳ್ಯ ಮತ್ತು ಬೆಳ್ಳಾರೆ ಆರೋಗ್ಯ ಕೇಂದ್ರದ ಡಾ॥ ಕುಲ್‌ದೀಪ್,ಶ್ರೀಮತಿ ಲೀಲಾವತಿ ಯಂ, ಶ್ರೀಮತಿ ಶಶಿಕಲಾ, ಶ್ರೀಮತಿ ನವ್ಯ,ಕು. ಮೋನಿಷಾ ಕೆ.ಬಿ, ಆನಂದ್, ಸುನೀತಾ ಶಂಕರ,
ತೇಜಶ್ರೀ, ಶ್ರೀಮತಿ ರೇವತಿ, ರೋಹಿತ್,ಶ್ರೀಮತಿ ಚೈತ್ರ ಮೊದಲಾದವರು ಭಾಗವಹಿಸಿ ಆರೋಗ್ಯ ತಪಾಷಣೆಯಲ್ಲಿ ಪಾಲ್ಗೊಂಡರು.

ಸಂಘದ ಕಾರ್ಯದರ್ಶಿ ಜಗದೀಶ್ ಡಿ ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.